ಮುಂಬೈ : ಮುಂಬೈ ಸರಣಿ ಬಾಂಬ್ ಸ್ಫೋಟ ರೂವಾರಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಆಪ್ತ ಸಹಾಯಕ ಫಾರುಖ್​ ಟಕ್ಲಾನನ್ನ ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ. ಈ ಮೂಲಕ ಮುಂಬೈ ಸರಣಿ ಬಾಂಬ್ ಸ್ಫೋಟ ವಿಚಾರದಲ್ಲಿ ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ.


COMMERCIAL BREAK
SCROLL TO CONTINUE READING

ದುಬೈನಲ್ಲಿ ಈತ ಅಡಗಿ ಕುಳಿತಿರುವ ಬಗ್ಗೆ ತಿಳಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ದುಬೈ ಸರ್ಕಾರದ ಜೊತೆ ಚರ್ಚೆ ನಡೆಸಿದ್ದರು. ಭಾರತ ಸರ್ಕಾರದ ಮನವಿಗೆ ಸ್ಪಂದಿಸಿ ಫಾರೂಖ್​ನ ಇತಿಹಾಸ ಜಾಲಾಡಿದ ದುಬೈ ಸರ್ಕಾರ ಕೊನೆಗೂ ಫಾರೂಕ್'ನನ್ನು ಗಡಿಪಾರು ಮಾಡಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.


1993ರ ಮುಂಬೈ ಸರಣಿ ಸ್ಫೋಟದ ರೂವಾರಿಯಾಗಿರುವ ಫಾರೂಕ್ ಟಕ್ಲಾ, ದುಬೈನಲ್ಲಿದ್ದುಕೊಂಡು ದಾವುದ್ ಇಬ್ರಾಹಿಂ ಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ದುಬೈನಲ್ಲಿ ದಾವೂದ್'ನ ದೊಡ್ಡ ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದ. ಇದೀಗ ಆತನನ್ನು ಬಂಧಿಸಿರುವ ಪೊಲೀಸರು ಟಾಡಾ ಕೋರ್ಟ್​ಗೆ ಇಂದು  ಹಾಜರುಪಡಿಸಲಿದ್ದಾರೆ.


ದಾವೂದ್ ಇಬ್ರಾಹಿಂ ವಿಚಾರದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು
ಫಾರೂಕ್ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ಉಜ್ವಲ್ ನಿಕ್ಕಮ್ ಅವರು, ದಾವೂದ್ ಇಬ್ರಾಹಿಂ ವಿಚಾರದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದು, ಅಂತೆಯೇ ದಾವೂದ್ ಗ್ಯಾಂಗ್ ಗೆ ಭಾರತ ನೀಡಿದ ದೊಡ್ಡ ಮರ್ಮಾಘಾತ ಇದಾಗಿದೆ. ಡಿ-ಗ್ಯಾಂಗ್ ನ ಮೊದಲ ಹಂತದ ಪಾತಕಿಗಳಲ್ಲಿ ಗುರುತಿಸಿಕೊಂಡ್ಡ ಟಕ್ಲಾ ಬಂಧನದಿಂದಾಗಿ ದಾವೂದ್ ಗ್ಯಾಂಗ್ ತೀವ್ರ ಹಿನ್ನಡೆಯಾಗಿದೆ ಎಂದು ಉಜ್ವಲ್ ನಿಕ್ಕಮ್ ಹೇಳಿದ್ದಾರೆ.