ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಈ ಹಿಂದೆ ಒಮ್ಮೆ ಲೋಕಸಭಾಗೆ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದಿದೆ.ಈಗ ಇನ್ನೊಂದು ವಿಷಯವೇನೆಂದರೆ ಅವರನ್ನು ರಾಜಕೀಯಕ್ಕೆ ತರುವುದಕ್ಕೆ ರಾಜೀವ್ ಗಾಂಧಿಗೆ ಇಂದಿರಾಗಾಂಧಿ ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಅಂಶ ಬೆಳೆಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಈಗ ರಶಿದ್  ಕಿದ್ವಾಯಿ  ಅವರು ಬರೆದ "Neta Abhineta: Bollywood Star Power in Indian Politics ಎನ್ನುವ ಪುಸ್ತಕದಲ್ಲಿ ಈ ಸಂಗತಿ ಬಗ್ಗೆ  ಪ್ರಸ್ತಾಪಿಸಲಾಗಿದೆ.ನೆಹರು ಮನೆತನದ ಜೊತೆ ಹತ್ತಿರದ ಬಾಂಧವ್ಯವನ್ನು ಹೊಂದಿದ್ದ ಅಮಿತಾಬ್ ಬಚ್ಚನ್ ಮುಂದೆ ರಾಜೀವ್ ಗಾಂಧಿಯವರ ಗೆಳೆತನದ ಮೂಲಕ ರಾಜಕೀಯಕ್ಕೂ ಕಾಲಿಟ್ಟಿದ್ದರು.


ಇನ್ನೊಂದು ವಿಷಯವೆಂದರೆ ಈ ಪುಸ್ತಕದಲ್ಲಿ ನೆಹರು ಮನೆತನ ಜೊತೆಗೆ ಬಚ್ಚನ್ ಕುಟುಂಬದ ಬಾಂಧ್ಯವ್ಯದ ಜೊತೆಗೆ ಹಲವು ವಿಷಯಗಳಲ್ಲಿ ಸಾಕಷ್ಟು ಮನಸ್ತಾಪವು ಇತ್ತು ಎಂದು  ಪ್ರಸ್ತಾಪಿಸಲಾಗಿದೆ.ಅದರಲ್ಲಿ ಪ್ರಮುಖವಾಗಿ ತೇಜಿ ಬಚ್ಚನ್ ಅವರ ಜೊತೆ ಉತ್ತಮ ಸಂಬಂಧವಿದ್ದರು ಸಹಿತ 80 ರ ದಶಕದಲ್ಲಿ ಇಂದಿರಾಗಾಂಧಿ ರಾಜ್ಯಸಭಾ ಸ್ಥಾನವನ್ನು ನರ್ಗಿಸ್ ದತ್ತ ಅವರಿಗೆ ನೀಡಿದ್ದರು ಎನ್ನಲಾಗಿದೆ.


ಇಂದಿರಾ ಗಾಂಧಿಯವರು ಅಕ್ಟೋಬರ್ 31, 1984 ರಲ್ಲಿ ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿಯನ್ನು ಕರೆದು "ಯಾವ ಕಾರಣಕ್ಕೂ ತೇಜಿ ಮಗ ಅಮಿತಾಬ್ ಬಚ್ಚನ್ ರನ್ನ ಚುನಾವಣಾ ರಾಜಕಾರಣಕ್ಕೆ ತರಬೇಡ" ಎಂದು ಹೇಳಿದ್ದರು ಎನ್ನುವ ಸಂಗತಿ ಈ ಪುಸ್ತಕದಲ್ಲಿ ದಾಖಲಾಗಿದೆ.