ನವದೆಹಲಿ: ಟಾಟಾ ಎಂಡಿ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ ಹೊಸ ಕೊರೊನಾವೈರಸ್ ರೂಪಾಂತರವನ್ನು ಪತ್ತೆಹಚ್ಚಲು ಆರ್ ಟಿ-ಪಿಸಿಆರ್ (RT-PCR test kit) ಪರೀಕ್ಷಾ ಕಿಟ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಬುಧವಾರ ಐಸಿಎಂಆರ್‌ನ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಪರೀಕ್ಷಾ ಕಿಟ್ (Corona Test kit) ಅನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದಿಸಿದೆ ಎಂದು ಅವರು ತಿಳಿಸಿದರು.


ಒಮಿಕ್ರಾನ್ ಡಿಟೆಕ್ಟಿಂಗ್ ಆರ್ ಟಿ-ಪಿಸಿಆರ್ ಕಿಟ್ ಅನ್ನು ಟಾಟಾ ಎಂಡಿ ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಡಿಸಿಜಿಐ ಅನುಮೋದಿಸಿದೆ. 


ಈ ಕಿಟ್ ಪರೀಕ್ಷೆಯು ನಾಲ್ಕು ಗಂಟೆಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬ್ರೀಫಿಂಗ್ ಸಮಯದಲ್ಲಿ ಡಾ.ಭಾರ್ಗವ ಹೇಳಿದರು.


ಡಾ.ಭಾರ್ಗವ ಅವರು ದೇಶದಲ್ಲಿ ಒಮಿಕ್ರಾನ್ ಪ್ರಧಾನವಾಗಿ ಪರಿಚಲನೆ ಮಾಡುವ ಸ್ಟ್ರೈನ್ ಎಂದು ಹೇಳಿದ್ದಾರೆ. ಸಚಿವಾಲಯದ ಪ್ರಕಾರ, ದೇಶದಲ್ಲಿ 2,135 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.


ಇದುವರೆಗೆ ಜಾಗತಿಕವಾಗಿ 108 ಒಮಿಕ್ರಾನ್ ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ: ಭಾರತದ ಭೂಪಟದೊಂದಿಗೆ ಸದಾ ಅಂಟಿಕೊಂಡಿರುವ ಶ್ರೀಲಂಕಾ ನಕ್ಷೆ.. ಇದಕ್ಕಿದೆ ಒಂದು ಮುಖ್ಯ ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ. 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.