ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಳ್ಳಬಟ್ಟಿ ಸಾರಾಯಿ ಸೇವನೆಯಿಂದಾಗಿ ಈವರೆಗೂ 88ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅವರಲ್ಲಿ ರೂರ್ಕಿ ಯಲ್ಲಿ 31 ಜನರು ಸಾವನ್ನಪ್ಪಿದ್ದರೆ, ಸಹರಾನ್ಪುರದಲ್ಲಿ 46 ಜನ ಮತ್ತು ಕುಶಿನಗರದಲ್ಲಿ 11 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮತ್ತು ಉತ್ತರಖಂಡದಲ್ಲಿ 33 ಎಫ್ಐಆರ್ ಗಳನ್ನು ನೋಂದಾಯಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಇದುವರೆಗೆ 39 ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಳ ವಿರುದ್ಧ ಎನ್ಎಸ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.


ರಾಜ್ಯದಾದ್ಯಂತ ಕಳ್ಳಬಟ್ಟಿ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚಿಸಿದ್ದಾರೆ. 


ಏತನ್ಮಧ್ಯೆ, ಉತ್ತರಪ್ರದೇಶದ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ತಂಡ ಆಗ್ರಾದಲ್ಲಿ 13 ಮದ್ಯ ಮಾಫಿಯಾ ಮತ್ತು ಮದ್ಯ ಕಳ್ಳಸಾಗಾಣಿಕೆದಾರರನ್ನು ಬಂಧಿಸಿವೆ. ಬಂಧನಕ್ಕೊಳಗಾದವರಲ್ಲಿ ಮಹಿಳೆಯರೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಸುಮಾರು 2700 ಲೀಟರ್ ಮದ್ಯ, 8 ಬ್ರೂವರಿ ಬಿಯರ್ ಅನ್ನು  ವಶಪಡಿಸಿಕೊಳ್ಳಲಾಗಿದೆ.