ಕರೋನಾ ಆರ್ಭಟ ಇಳಿಮುಖ, ಜೂನ್ ತಿಂಗಳಲ್ಲಿ 10 ಕೋಟಿ ಕೊವಿಶೀಲ್ಡ್ ಲಭ್ಯ
ಕಳೆದ 24 ಗಂಟೆಗಳಲ್ಲಿ ಒಟ್ಟು 1.53 ಲಕ್ಷ ಜನರಿಗೆ ಕರೋನಾ ಸೋಂಕು ತಗುಲಿದೆ. ಏಪ್ರಿಲ್ 10 ಬಳಿಕ ಇದೇ ಮೊದಲ ಬಾರಿ ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಸೋಂಕು ಹರಡಿದೆ.
ನವದೆಹಲಿ : ಕರೋನಾ ಮಹಾಮಾರಿಯ ವಿಚಾರದಲ್ಲಿ ಸ್ವಲ್ಪ ರಿಲ್ಯಾಕ್ಸ್ ಆಗುವ ಸುದ್ದಿ ಬಂದಿದೆ. ದೇಶಾದದ್ಯಂತ ಕರೋನಾ (Coronavirus) ಆರ್ಭಟ ಕಡಿಮೆಯಾಗುತ್ತಿದೆ. ಖುಷಿಯ ವಿಚಾರವೆಂದರೆ, ಕರೋನಾ (COVID-19) ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ. ಭಾನುವಾರ ಬಂದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,722 ಜನರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 12 ವಾರಗಳ ಬಳಿಕ ಮೃತ ಸಂಖ್ಯೆಯಲ್ಲಿ ಇಳಿಕೆ ದಾಖಲಾಗಿದೆ. ಕಳೆದ 34 ದಿನಗಳಲ್ಲಿ ಪ್ರತಿದಿನ ಕರೋನಾಕ್ಕೆ 3000ದಿಂದ 4000 ಮಂದಿ ಸಾವಿಗೀಡಾಗುತ್ತಿದ್ದರು. ಸಾವಿನ ಸಂಖ್ಯೆಯಲ್ಲಿ ಶೇ. 17 ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕಿತರ ಸಂಖ್ಯೆಯಲ್ಲೂ ಇಳಿಕೆ
ಇದೇ ವೇಳೆ ಕಳೆದ 24 ಗಂಟೆಗಳಲ್ಲಿ ಒಟ್ಟು 1.53 ಲಕ್ಷ ಜನರಿಗೆ ಕರೋನಾ (Coronavirus) ಸೋಂಕು ತಗುಲಿದೆ. ಏಪ್ರಿಲ್ 10 ಬಳಿಕ ಇದೇ ಮೊದಲ ಬಾರಿ ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಸೋಂಕು ಹರಡಿದೆ. ಕರ್ನಾಟಕವೂ (Karnataka) ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಮತ್ತು ಮೃತಪಟ್ಟವರ ಸಂಖ್ಯೆ ಇಳಿಮುಖವಾಗುತ್ತಿದೆ.
ಇದನ್ನೂ ಓದಿ : Covid Patients: ಕರೋನಾದಿಂದ ಚೇತರಿಸಿಕಂಡ ಬಳಿಕ ಎಷ್ಟು ದಿನಗಳವರೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬಾರದು? ಇಲ್ಲಿದೆ ICMR ಸಲಹೆ
ಜೂನ್‍ನಲ್ಲಿ 10 ಕೋಟಿ ಲಸಿಕೆ :
ಇದೇ ವೇಳೆ ಜೂನ್ ಅಂತ್ಯಕ್ಕೆ 10 ಕೋಟಿ ಕೊವಿಶೀಲ್ಡ್ (Covishield) ಲಸಿಕೆ ಲಭ್ಯವಾಗಲಿದೆ ಎಂದು ಪುಣೆಯ ಸೆರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಇದರೊಂದಿಗೆ ಲಸಿಕೆಯ (Vaccine) ಕೊರತೆ ದೂರವಾಗುವ ಸಾಧ್ಯತೆಗಳು ಗೋಚರಿಸಿದೆ. ಕರೋನಾ ವಿರುದ್ದ ಸರ್ಕಾದ ಲಸಿಕಾ ಅಭಿಯಾನ (Vaccination) ಜೋರು ಪಡೆಯಲಿದೆ.
ಇದನ್ನೂ ಓದಿ : Corona Third Wave: ಕರೋನಾದ ಮೂರನೇ ತರಂಗ ಭಯ ಹುಟ್ಟಿಸುತ್ತದೆ, ಸರ್ಕಾರಕ್ಕೆ IIT ಎಚ್ಚರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ