ನವದೆಹಲಿ, ಆ. 28 : ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಿಂದಿನ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ಜೆ. ಸ್. ಖೇಹರ್ ಅವರು, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಮಿಶ್ರ ಹೆಸರನ್ನು ಶಿಫಾರಸ್ಸು ಮಾಡಿದ್ದರು. 


COMMERCIAL BREAK
SCROLL TO CONTINUE READING

ಪ್ರಸ್ತುತ ಇರುವ ಸಿಜೆಐ ನೇಮಕಾತಿ ವಿಧಿವಿಧಾನದ ಅನ್ವಯ ಕಾನೂನು ಸಚಿವರು, ಸಿಜೆಐಯವರಿಗೆ ಪರ್ತ ಬರೆದು ತಮ್ಮ ಉತ್ತರಾಧಿಕಾರಿಯ ಹೆಸರು ಶಿಫಾರಸ್ಸು ಮಾಡುವಂತೆ ಕೋರುತ್ತಾರೆ. ಸುಪ್ರೀಂ ಕೋರ್ಟ್ ಹಾಗೂ ೨೪ ಹೈ ಕೋರ್ಟ್ ಗಳ  ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ ಹಾಗೂ ಬಡ್ತಿಗೆ ಇರುವ ನಿಯಮಾವಳಿಗಳ ಅನ್ವಯ, ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ವ್ಯಕ್ತಿ, ಆ ಹುದ್ಧೆಗೆ  ಸೂಕ್ತ ಎನಿಸುವ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಯಾಗಿರಬೇಕು. 


ಆಗಸ್ಟ್ 27ರಂದು ನಿವೃತ್ತರಾದ ಖೇಹರ್, ಈ ಹುದ್ದೆಗೆ ಮಿಶ್ರ ಅವರ ಹೆಸರು ಶಿಫಾರಸ್ಸು ಮಾಡಿ ಪತ್ರ ಬರೆದಿದ್ದರು ಎಂದು ಮೂಲಗಳು ಖಚಿತಪಡಿಸಿದ್ದವು. ನ್ಯಾಯಮೂರ್ತಿ ಖೇಹರ್ ಬಳಿಕ ನ್ಯಾಯಮೂರ್ತಿ ದೀಪಕ್ ಮಿಶ್ರಾ  ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದರು. ನ್ಯಾಯಮೂರ್ತಿ ಮಿಶ್ರ ಅವರು 2018ರ ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದಾರೆ.