ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ವಿರುದ್ಧದ ಆರೋಪಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಪಕ್ಷದ ನಾಯಕರು ಕ್ಷಮೆ ಯಾಚಿಸಿದ್ದಾರೆ. 



COMMERCIAL BREAK
SCROLL TO CONTINUE READING

ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷದ ನಾಯಕರಾದ ಸಂಜಯ್ ಸಿಂಗ್, ಅಶುತೋಷ್, ದೀಪಕ್ ಬಾಜ್ಪಾಯ್ ಮತ್ತು ವಕ್ತಾರ ರಾಘವ್ ಚಾಧಾ ಕ್ಷಮಾಪಣೆ ಕೋರಿ ಏಪ್ರಿಲ್ 2 ರಂದು ದೆಹಲಿ ನ್ಯಾಯಾಲಯದಲ್ಲಿ ಜಂಟಿ ಅರ್ಜಿ ಸಲ್ಲಿಸಿದ್ದಾರೆ.



ಮಾಹಿತಿ ಪ್ರಕಾರ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲಾಗಿಲ್ಲ, ಆದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯ ಆದೇಶದಡಿಯಲ್ಲಿ ಜಂಟಿ ಪತ್ರವೊಂದನ್ನು ಬರೆದಿದ್ದಾರೆ.



ವಿತ್ತ ಸಚಿವ ಅರುಣ್ ಜೇಟ್ಲಿ, ಅರವಿಂದ ಕೇಜ್ರಿವಾಲ್, ರಾಘವ ಚಂದಾ, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಹಾಗೂ ದೀಪಕ್ ಬಾಜ್ ಪೈ ವಿರುದ್ಧ 10ಕೋಟಿ ರೂ. ಗಳ ಮಾನನಷ್ಟ ಮೊಕದ್ಧಮೆ ಪ್ರಕರಣವನ್ನು ದಾಖಲಿಸಿದ್ದರು.


ಈ ಹಿಂದೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾನನಷ್ಟ ಪ್ರಕರಣ ಕೊನೆಗೊಳಿಸಲು ಮಾರ್ಚ್ 19 ರಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ನಿತಿನ್ ಗಡ್ಕರಿಗೆ ಕ್ಷಮೆ ಯಾಚಿಸಿದ್ದರು. ಗಡ್ಕರಿ ವಿರುದ್ಧ ಕೆಜೆರಿವಾಲ್ ಭ್ರಷ್ಟಾಚಾರ ಆರೋಪ ಮಾಡಿದ್ದರು. ಕ್ಷಮೆಯಾಚಿಸಿದ ಬಳಿಕ, ಕೇಂದ್ರ ಸಚಿವರು ತಮ್ಮ ಮಾನನಷ್ಟ ಪ್ರಕರಣವನ್ನು ಹಿಂತೆಗೆದುಕೊಂಡರು.