ನವದೆಹಲಿ: ಎಲ್‌ಎಸಿಯಲ್ಲಿ ಇಂಡೋ-ಚೀನಾ (Indo-China) ಉದ್ವಿಗ್ನತೆಯ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath singh)  ಸೋಮವಾರ ರಷ್ಯಾಕ್ಕೆ ತೆರಳಿದ್ದಾರೆ. ಮೂರು ದಿನಗಳ ಭೇಟಿಯಲ್ಲಿ ಉಭಯ ದೇಶಗಳ ನಡುವೆ ರಕ್ಷಣಾ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಚರ್ಚಿಸುವ ನಿರೀಕ್ಷೆಯಿದೆ. 


COMMERCIAL BREAK
SCROLL TO CONTINUE READING

ಮಾಸ್ಕೋದಲ್ಲಿ ನಡೆಯಲಿರುವ ವಿಜಯ್ ಪೆರೇಡ್‌ನಲ್ಲಿ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ. ಎಸ್ -400 ಟ್ರಯಂಫ್ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ತ್ವರಿತವಾಗಿ ತಲುಪಿಸಲು ಭಾರತ ರಷ್ಯಾಕ್ಕೆ ಒತ್ತಡ ಹೇರಬಹುದು. ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರು ರಾಜನಾಥ್ ಸಿಂಗ್ ಅವರೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ.



ರಷ್ಯಾಕ್ಕೆ ತೆರಳುವ ಮೊದಲು ರಕ್ಷಣಾ ಸಚಿವರು, "ರಷ್ಯಾ (Russia) ಭೇಟಿಯ ಸಮಯದಲ್ಲಿ, ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಮಾತುಕತೆ ನಡೆಯಲಿದೆ. ಮಾಸ್ಕೋದಲ್ಲಿ ನಡೆಯಲಿರುವ 75ನೇ ವಿಜಯ ಪರೇಡ್ ದಿನದಲ್ಲಿಯೂ ನಾನು ಭಾಗವಹಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.