ನವದೆಹಲಿ: ಈಗ ದೇಶದ ರಕ್ಷಣಾ ಸಚಿವಾಲಯಕ್ಕೂ ರಕ್ಷಣೆ ಸಿಗದ ಪರಿಸ್ಥಿತಿ ಎದುರಾಗಿದೆ, ಹೌದು, ರಕ್ಷಣಾ ಇಲಾಖೆಯನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡುವ ಮೂಲಕ ಈ ಅಂಶವು ಸ್ಪಷ್ಟವಾಗಿದೆ.


COMMERCIAL BREAK
SCROLL TO CONTINUE READING

ರಕ್ಷಣಾ ಖಾತೆಯ ವೆಬ್ ಸೈಟ್ ಹ್ಯಾಕ್ ಆಗಿರುವ ಕುರಿತಾಗಿ ಸ್ವತಃ ಕೇಂದ್ರ ರಕ್ಷಣಾ ಸಚಿವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.ಇದರಿಂದ ಎಚ್ಚೆತ್ತು ಕೊಂಡಿರುವ ಗೃಹ ಇಲಾಖೆಯು ಸಹಿತ ಪೂರ್ವಯೋಚಿತವಾಗಿ  ವೆಬ್ ಸೈಟ್ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ರಕ್ಷಣೆ ನಿಟ್ಟಿನಲ್ಲಿ ಸ್ಥಗೀತಗೊಳಿಸಿದ್ದಾರೆ.ಇದರ ನಿರ್ವಹಣೆಯನ್ನು ನೇಶನ್ ಇನ್ಫಾರ್ಮೆಟಿಕ್  ಸೆಂಟರ್  ಮಾಡಲಿದೆ.



ಈ ಕುರಿತಾಗಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ "ರಕ್ಷಣಾ ಇಲಾಖೆಯ ವೆಬ್ ಸೈಟ ಹ್ಯಾಕ್ ಆದ ನಂತರ ಅದಕ್ಕೆ ಸಂಬಂಧಪಟ್ಟ ಕಾರ್ಯವನ್ನು ಕೈಗೊಳ್ಳಲಾಗಿದೆ,ಸಧ್ಯದಲ್ಲೇ ಈ ವೆಬ್ ಸೈಟ್ ನ್ನು ಮತ್ತೆ ಚಾಲನೆ ನೀಡಲಾಗುವುದು,ಮತ್ತು ಮುಂದೆ ಈ ರೀತಿ ಘಟನೆ ಜರುಗುದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.