ರಾಮಮಂದಿರ ಪ್ರಕರಣದಲ್ಲಿ ನ್ಯಾಯ ವಿಳಂಬವಾದರೆ ಅನ್ಯಾಯವೆಸಗಿದಂತೆ-ಯೋಗಿ ಆದಿತ್ಯನಾಥ್
ರಾಮಮಂದಿರ ವಿವಾದವನ್ನು ಬೇಗನೆ ಇತ್ಯರ್ಥಗೊಳಿಸಬೇಕು, ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯ ವಿಳಂಬವಾದಲ್ಲಿ ಅದು ಅನ್ಯಾಯವೆಸಗಿದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ರಾಮಮಂದಿರ ವಿವಾದವನ್ನು ಬೇಗನೆ ಇತ್ಯರ್ಥಗೊಳಿಸಬೇಕು, ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯ ವಿಳಂಬವಾದಲ್ಲಿ ಅದು ಅನ್ಯಾಯವೆಸಗಿದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಈಗ ರಾಮಮಂದಿರ ಪ್ರಕರಣದ ವಿಚಾರಣೆಯನ್ನು ಜನವರಿಗೆ ಮುಂದೂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಯೋಗಿ" ಸಮಯಕ್ಕೆ ಬದ್ದವಾದ ನ್ಯಾಯವು ನಿಜವಾದ ನ್ಯಾಯವಾಗಿದೆ.ಒಂದು ವೇಳೆ ನ್ಯಾಯದಲ್ಲಿ ವಿಳಂಬವಾದರೆ ಅದು ಅನ್ಯಾಯವೆಸಗಿದಂತೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಯೋಗಿ "ಈ ದೇಶದ ಬಹುತೇಕ ಜನರು ಮತ್ತು ಶಾಂತಿ ಪ್ರಿಯ ನಾಗರಿಕರು ರಾಮಮಂದಿರ ಪ್ರಕರಣದಲ್ಲಿ ಶೀಘ್ರ ನ್ಯಾಯ ದೊರಕಬೇಕೆನ್ನುವುದು ಅವರ ಒತ್ತಾಸೆಯಾಗಿದೆ.ಆದ್ದರಿಂದ ಅವರ ಭಾವನೆಗಳನ್ನು ಗೌರವಿಸಬೇಕೆಂದು ಅವರು ತಿಳಿಸಿದರು.
ನಿನ್ನೆ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಈ ವಿವಾದವು ಸುಮಾರು 100 ವರ್ಷಗಳದ್ದಾಗಿರುವುದರಿಂದ ಈ ಪ್ರಕರಣಕ್ಕೆ ವಿಚಾರಣೆ ವೇಳೆ ಪ್ರಾಶಸ್ತ್ಯ ನೀಡಬೇಕು ಎಂದು ವಾದಿಸಿತ್ತು.