ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಕುರಿತು CJI ಹೇಳಿದ್ದೇನು?
ನಿರ್ಭಯಾ ಪ್ರಕರಣದ ತೀರ್ಪಿನಲ್ಲಿ ಆಗುತ್ತಿರುವ ವಿಳಂಬದ ಹಿನ್ನೆಲೆ ಮಾತನಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ದೆ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಕುರಿತು ಚಿಂತನೆ ನಡೆಸಿದ್ದಾರೆ.
ನವದೆಹಲಿ: ನಿರ್ಭಯಾ ಪ್ರಕರಣದ ತೀರ್ಪಿನಲ್ಲಿ ಆಗುತ್ತಿರುವ ವಿಳಂಬದ ಹಿನ್ನೆಲೆ ಮಾತನಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ದೆ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಕುರಿತು ಚಿಂತನೆ ನಡೆಸಿದ್ದಾರೆ. ಈ ಕುರಿತು ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. "ಸದ್ಯ ಚಾಲ್ತಿಯಲ್ಲಿರುವ ನ್ಯಾಯ ವ್ಯವಸ್ಥೆ, ಪೊಲೀಸ್ ಕಾರ್ಯಾಚರಣೆಯ ಪದ್ಧತಿಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸುನಿಶ್ಚಿತಗೊಳಿಸುವ ಕಾರ್ಯ ನಡೆಯಬೇಕಿದೆ" ಎಂದು ಅವರು ಹೇಳಿದ್ದಾರೆ.
ಎಲ್ಲ ರಾಜ್ಯಗಳಿಗೆ ಅವರು ನೋಟಿಸ್ ಜಾರಿಗೊಳಿಸಿದ್ದು, ನೋಟೀಸ್ ನಲ್ಲಿ 2017ರಲ್ಲಿ ದೇಶಾದ್ಯಂತ 32559 ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬಂದಿರುವುದು ಚಿಂತಾಜನಕವಾಗಿದೆ ಎಂದಿದ್ದಾರೆ. ಎಲ್ಲ ರಾಜ್ಯಗಳ ಮುಖ್ಯ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಸದ್ಯ ಚಾಲ್ತಿಯಲ್ಲಿರುವ ಕಾನೂನು ಕ್ರಮಗಳ ಪದ್ಧತಿ ಕುರಿತು ಸ್ಟೇಟಸ್ ರಿಪೋರ್ಟ್ ನೀಡುವಂತೆ ಸೂಚಿಸಿದ್ದು, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಮೇಲೆ ಪೊಲೀಸರ ಕ್ರಮ ಏನು? ಮತ್ತು ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಫೋರೆನ್ಸಿಕ್ ಏಜೆನ್ಸಿಗಳ ಸಂಖ್ಯೆ ಎಷ್ಟು ಮತ್ತು ಅವರ ಬಳಿ ಇರುವ ಸಾಧನಗಳೇನು? ಅವರ ಬಳಿ ಇರುವ ತಾಂತ್ರಿಕ ವ್ಯವಸ್ಥೆ ಏನು ಮತ್ತು ಎಷ್ಟು ಸಿಬ್ಬಂದಿಗಳನ್ನು ಆವು ಹೊಂದಿವೆ? ಎಂದು ಪ್ರಶ್ನಿಸಿದ್ದಾರೆ. ಸರಿಯಾದ ಸಮಯಕ್ಕೆ ಪ್ರಕರಣ ಯಾಕೆ ದಾಖಲಿಸಲಾಗಿಲ್ಲ ಅಥವಾ ಪ್ರಕರಣ ದಾಖಲಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮ ಏನು ಎಂದೂ ಕೂಡ ಅವರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ರೇಪ್ ಪೀಡಿತರ ಚಿಕಿತ್ಸೆ ಹಾಗೂ ಅದರ ವೈದ್ಯಕೀಯ ಪರೀಕ್ಷೆಗೆ ನಡೆಸಲು ಕೈಗೊಂಡ ಪದ್ಧತಿ, ಬಳಸಿದ ಸಾಧನಗಳೇನು? ಎಲ್ಲ ಆಸ್ಪತ್ರೆಗಳಲ್ಲಿ ರೇಪ್ ಪೀಡಿತರು ಹಾಗೂ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲು ಸ್ಥಿರ ಮಾನದಂಡಗಳನ್ನು ಹೊದಿರುವ ಕಿಟ್ ಗಳಿವೆಯೇ? ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ರೇಪ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುತ್ತವೆಯೋ ಅಥವಾ ಇಲ್ಲ? ನ್ಯಾಯಾಲಯಗಳಲ್ಲಿ ರೇಪ್ ಪ್ರಕರಣಗಳ ವಿಚಾರಣೆ ಮಹಿಳಾ ನ್ಯಾಯಾಧೀಶೆ ನಡೆಸಬೇಕು ಎಂಬುದರ ಅಂಕಿ-ಅಂಶಗಳೇನು? ವಿಶೇಷ ನ್ಯಾಯಾಲಯಗಳ ಸಂಖ್ಯೆ ಎಷ್ಟು? ಜೊತೆಗೆ ಟ್ರಯಲ್ ಶೀಘ್ರ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿವೆ ಎಂಬುದನ್ನು ಸುನಿಶ್ಚಿತಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ? ಇತ್ಯಾದಿಗಳ ಮಾಹಿತಿ ನೀಡಲು ಮುಖ್ಯನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಜೊತೆಗೆ ಈ ಕಾರ್ಯಕ್ಕೆ ಎಲ್ಲ ಹೈಕೋರ್ಟ್ ಗಳ ರಜಿಸ್ಟ್ರಾರ್ ಜನರಲ್ ಗಳು ಸಹಕರಿಸಬೇಕು ಎಂಬ ನಿರ್ದೇಶನಗಳನ್ನೂ ಸಹ ಸುಪ್ರೀಂ ನೀಡಿದೆ. ಈ ಪ್ರಕರಣದ ಮುಂದಿನ ತನಿಖೆ ಫೆಬ್ರುವರಿ 7, 2020ಕ್ಕೆ ನಡೆಯಲಿದೆ.