ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್ ; ಮದ್ಯ ಹಗರಣ ಕೇಸ್ ಟೈಮ್ ಲೈನ್ ಇಲ್ಲಿದೆ
Arvind Kejriwal Arrested: ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಜುಲೈ 2022 ರಲ್ಲಿ ದೆಹಲಿ ಮದ್ಯ ಮಾರಾಟ ನೀತಿ ಸಮಸ್ಯೆಯ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ವರದಿಯನ್ನು ಸಲ್ಲಿಸಿದ್ದರು. ಈ ನೀತಿಯನ್ನು ರೂಪಿಸುವಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದಿದ್ದ ಅವರು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರು.
Delhi CM Arvind Kejriwal Arrested: 2024ರ ಲೋಕಸಭೆ ಚುನಾವಣೆಗೆ ಕೆಲವೇ ವಾರ ಬಾಕಿ ಇದೇ, ಆದರೆ ಎಲೆಕ್ಷನ್ ಮೂಡ್ ನಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಗಿದೆ. ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಜಾರಿ ನಿರ್ದೇಶನಾಲಯ (ED) ಮದ್ಯ ಹಗರಣದಲ್ಲಿ (Delhi liquor case)ಅರೆಸ್ಟ್ ಮಾಡಿದೆ.
ಜಾರಿ ನಿರ್ದೇಶನಾಲಯ ಆಡಳಿತ ಬಿಜೆಪಿಯ ಕೈಗೊಂಬೆ ಮಾಡಿಕೊಂಡು ಇತರೆ ಪಕ್ಷಗಳ ವಿರುದ್ಧ ಅಸ್ತ್ರವನ್ನಾಗಿ ಉಪಯೋಗಿಸುತ್ತಿದೆ ಎಂದು ಕೆಂಡಾಕಾರುತ್ತಿವೆ. ಆದರೆ ಅರವಿಂದ್ ಕೇಜ್ರಿವಾಲ್ ಅವರ ನಿನ್ನೆಯ (ಮಾರ್ಚ್ 21) ಬೆಳವಣಿಗೆಗಳಿಗೆ ಕಾರಣವಾದ ದೆಹಲಿ ಮದ್ಯ ನೀತಿ ಪ್ರಕರಣದ ಘಟನೆಗಳ ಟೈಮ್‌ಲೈನ್ ಇಲ್ಲಿದೆ:
* ನವೆಂಬರ್ 2021: ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತು.
* ಜುಲೈ 8, 2022: ದೆಹಲಿ ಮುಖ್ಯ ಕಾರ್ಯದರ್ಶಿ ಈ ಹೊಸ ಅಬಕಾರಿ ನೀತಿಯಲ್ಲಿನ ಸಂಪೂರ್ಣ ಉಲ್ಲಂಘನೆಗಳನ್ನು ವರದಿ ಮಾಡಿದ್ದಾರೆ.
ಇದನ್ನೂ ಓದಿ- ರಾಕುಟೆನ್ ಇಂಡಿಯಾ ಹೆಸರಲ್ಲಿ ಆರ್-ಓಲೆ (R-ole) ನಡೆಸುತ್ತಿರುವ ವಂಚನೆ ಬಗ್ಗೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ
* ಜುಲೈ 22, 2022: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ನಿಯಮಗಳ ಉಲ್ಲಂಘನೆಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.
* ಆಗಸ್ಟ್ 19, 2022: ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಮೂವರ ಮೇಲೆ ಸಿಬಿಐ ದಾಳಿ ನಡೆಸಿತ್ತು.
* ಆಗಸ್ಟ್ 22, 2022: ಜಾರಿ ನಿರ್ದೇಶನಾಲಯವು ಮದ್ಯದ ನೀತಿಯ ಮೇಲೆ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿತ್ತು.
* ಸೆಪ್ಟೆಂಬರ್, 2022: ಆಮ್ ಆದ್ಮಿ ಪಕ್ಷದ ಸಂವಹನ ಮುಖ್ಯಸ್ಥ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿತ್ತು.
* ಮಾರ್ಚ್ 2023: ಜಾರಿ ನಿರ್ದೇಶನಾಲಯವು ಅಂದಿನ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು.
* ಅಕ್ಟೋಬರ್ 2023: ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು.
* ಅಕ್ಟೋಬರ್ 2023: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇಡಿ ಮೊದಲ ಸಮನ್ಸ್ ಕಳುಹಿಸಿತು.
* ಮಾರ್ಚ್ 16, 2024: ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು.
ಇದನ್ನೂ ಓದಿ- Lok Sabha Election 2024: ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಐಎಡಿಎಂಕೆ
* ಮಾರ್ಚ್ 21, 2024: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಒಂಬತ್ತನೇ ಬಾರಿಗೆ ಇಡಿ ಸಮನ್ಸ್‌ನಿಂದ ಹೊರಗುಳಿದರು. ಮಾತ್ರವಲ್ಲದೆ, ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸುವ ಮೂಲಕ ದೆಹಲಿ ಹೈಕೋರ್ಟ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿತು. ಜಾರಿ ನಿರ್ದೇಶನಾಲಯದ ತಂಡವು ಅವರ ಮನೆಯಲ್ಲಿ ಶೋಧ ಮತ್ತು ವಿಚಾರಣೆ ನಡೆಸಿತು, ನಂತರ ಅವರನ್ನು ಬಂಧಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.