ಭದ್ರತಾ ಲೋಪದಿಂದ ರೋಡ್ ಶೋ ವೇಳೆ ಸಿಎಂ ಕೇಜ್ರಿವಾಲ್ ಗೆ ಕಪಾಳಮೋಕ್ಷ
ದೆಹಲಿಯ ಮೋತಿನಗರದಲ್ಲಿ ರೋಡ್ ಶೋ ವೇಳೆ ಭದ್ರತಾಲೋಪದಿಂದಾಗಿ ಅಪರಿಚಿತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
ನವದೆಹಲಿ: ದೆಹಲಿಯ ಮೋತಿನಗರದಲ್ಲಿ ರೋಡ್ ಶೋ ವೇಳೆ ಭದ್ರತಾಲೋಪದಿಂದಾಗಿ ಅಪರಿಚಿತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
ತೆರದ ವಾಹನದಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್ ಮೇಲೆ ಏಕಾಏಕಿ ವ್ಯಕ್ತಿಯೊಬ್ಬ ವಾಹನದತ್ತ ನುಗ್ಗಿ ಕಪಾಳ ಮೋಕ್ಷ ಮಾಡಿದ್ದಾನೆ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ಈ ಘಟನೆಗೆ ಬಿಜೆಪಿ ಕಾರಣ ಎಂದು ಆಮ್ ಆದ್ಮಿ ಪಕ್ಷ ಕಾರಣವೆಂದು ಆರೋಪಿಸಿದೆ. ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಶಾಸಕ ಸೌರಭ ಭಾರದ್ವಾಜ್ " ದೈಹಿಕವಾಗಿ ದಾಳಿ ಮಾಡುವುದೊಂದೇ ಮಾರ್ಗ ಎಂದು ಬಿಜೆಪಿಯವರು ತಿಳಿದಿದ್ದಾರೆ" ಎಂದರು.
ಇನ್ನೊಂದೆಡೆಗೆ ಸಿಎಂ ಕೇಜ್ರಿವಾಲ್ ಮೇಲೆ ಮಾಡಿರುವ ಈ ದಾಳಿಯನ್ನು ಖಂಡಿಸಿರುವ ಮಮತಾ ಬ್ಯಾನರ್ಜೀ ನೇತೃತ್ವದ ತೃಣಮೂಲ ಕಾಂಗ್ರೆಸ್ ದೆಹಲಿಯಲ್ಲಿ ಕೇಜ್ರಿವಾಲ್ ಮೇಲೆ ನಡೆದಿರುವ ಘಟನೆ ಮತ್ತು ಬೆಂಗಾಲದಲ್ಲಿ ಸಿಲ್ಲಿ ವೀಡಿಯೋ ಮೂಲಕ ಮಮತಾ ಬ್ಯಾನರ್ಜೀಯವರನ್ನು ಟಾರ್ಗೆಟ್ ಮಾಡಿರುವುದನ್ನು ನೋಡಿದರೆ ಬಿಜೆಪಿ ಈಗಾಗಲೇ ಸೋತಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ. ಅವರು ಈಗಾಗಲೇ ಗೇಮ್ ಚೆಂಜರ್ ಗಳನ್ನು ಹುಡುಕುವುದಕ್ಕಾಗಿ ಉದ್ದೇಶಪೂರ್ವಕವಾಗಿ ಈ ರೀತಿ ಘಟನೆಗಳನ್ನು ಸೃಷ್ಟಿಸುತ್ತಿದ್ದಾರೆ.ಈಗಾಗಲೇ ಜನರು ಆಟವನ್ನು ಬದಲಾಯಿಸಿದ್ದಾರೆ. ಮೋದಿ ಈಗ ಔಟ್ ಆಗಿದ್ದಾರೆ " ಎಂದು ಟ್ವೀಟ್ ಮಾಡಿದೆ.
ಈಗ ಕೇಜ್ರಿವಾಲ್ ಮೇಲೆ ದಾಳಿ ಮಾಡಿರುವ ವ್ಯಕ್ತಿಯನ್ನು ಸುರೇಶ ಎಂದು ಗುರುತಿಸಲಾಗಿದೆ.ಈಗಾಗಲೇ ಆಪ್ ಪಕ್ಷದ ಬೆಂಬಲಿಗರು ಆತನನ್ನು ವಶಪಡಿಸಿಕೊಂಡಿದ್ದಾರೆ.ನಂತರ ಅವರನ್ನು ಪೋಲಿಸ್ ರಿಗೆ ಒಪ್ಪಿಸಿ ವಿಚಾರಣೆ ನಡೆಸಲಾಯಿತು.ಈ ಹಿಂದೆ ಸಿಎಂ ಅರವಿಂದ್ ಕೇಜ್ರಿವಾಲ್ ಮೇಲೆ ಕಳೆದ ವರ್ಷ ದೆಹಲಿ ಸಚಿವಾಲಯದ ಕಚೇರಿಯಲ್ಲಿ ವಕ್ತಿಯೊಬ್ಬ ಮನವಿ ಪತ್ರ ನೀಡಿ ನಂತರ ಕಾರವನ್ನು ಎರಚಿಸಿದ್ದನು.