ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಡಿಟಿಸಿಯ ಕ್ಲಸ್ಟರ್ ಬಸ್; 6 ಮಕ್ಕಳಿಗೆ ಗಾಯ
ಈ ಶಾಲಾ ಬಸ್ ರಾಜೇಂದ್ರ ನಗರದ ಸಲ್ವಾನ್ ಪಬ್ಲಿಕ್ ಶಾಲೆಗೆ ಸೇರಿದ್ದು, ಅಪಘಾತದ ಸಮಯದಲ್ಲಿ 27 ಮಕ್ಕಳು ಶಾಲಾ ಬಸ್ನಲ್ಲಿದ್ದರು ಎನ್ನಲಾಗಿದೆ.
ನವದೆಹಲಿ: ಪಶ್ಚಿಮ ದೆಹಲಿಯ ನಾರಾಯಣ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್ ಕ್ಲಸ್ಟರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳಿಗ್ಗೆ 7: 10 ಕ್ಕೆ ಕರೆ ಬಂದಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಡಿಕ್ಕಿಯಲ್ಲಿ ಗಾಯಗೊಂಡಿದ್ದ ಆರು ಮಕ್ಕಳನ್ನು ಸ್ಥಳೀಯರ ಸಹಾಯದಿಂದ ಕಪೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಸ್ ರಾಜೇಂದ್ರ ನಗರದ ಸಲ್ವಾನ್ ಪಬ್ಲಿಕ್ ಶಾಲೆಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ಸಮಯದಲ್ಲಿ ಶಾಲಾ ಬಸ್‌ನಲ್ಲಿ 27 ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ಎರಡೂ ಬಸ್‌ಗಳು ತಿರುವು ತೆಗೆದುಕೊಳ್ಳುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಡಿಟಿಸಿಯ ಕ್ಲಸ್ಟರ್ ಬಸ್‌ನ ಚಾಲಕ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ಹೇಳಲಾಗಿದೆ.