ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಮೂರನೇ ದಿನವೂ ಅಗ್ನಿ ಅವಘಡ ಮುಂದುವರೆದಿದೆ. ಗುರುವಾರ ಬೆಳ್ಳಂಬೆಳಗ್ಗೆ ನಾರಾಯಣ ಕಾರ್ಖಾನೆಯಲಿ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು 20 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿವೆ.


COMMERCIAL BREAK
SCROLL TO CONTINUE READING


ಕಾರ್ಖಾನೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಹರಸಾಹಸ. (Pic: ANI)


ಈ ಕಾರ್ಖಾನೆಯಲ್ಲಿ ಉಡುಗೊರೆ ವಸ್ತುಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದಾಗಿಯೇ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ. ಈ ದುರಂತದಲ್ಲಿ ಈವರೆಗೂ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.



ಮಂಗಳವಾರ ದೆಹಲಿಯ ಕರೋಲ್ ಬಾಗ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಅಗ್ನಿದುರಂತ ಸಂಭವಿಸಿ 17 ಮಂದಿ ಮೃತಪಟ್ಟಿದ್ದರು. ಬುಧವಾರ ದೆಹಲಿಯ ಪಶ್ಚಿಮ್‌ಪುರಿ ಕೊಳೆಗೇರಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 200ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು.