ಕತುವಾ ಪ್ರಕರಣ: ಬಾಲಕಿಯ ಹೆಸರು ಬಹಿರಂಗಪಡಿಸಿದ್ದಕ್ಕೆ ದೆಹಲಿ ಕೋರ್ಟನಿಂದ ಗೂಗಲ್, ಫೇಸ್ ಬುಕ್ ಗೆ ನೋಟಿಸ್
ನವದೆಹಲಿ: ಕತುವಾ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಹೆಸರನ್ನು ಬಹಿರಂಗ ಪಡಿಸಿದ್ದಕ್ಕೆ ಸೋಶಿಯಲ್ ಮೀಡಿಯಾಗಳಾದ ಗೂಗಲ್ ಫೇಸ್ ಬುಕ್ ಟ್ವಿಟ್ಟರ್ ಗಳಿಗೆ ದೆಹಲಿಯ ಹೈಕೋರ್ಟ್ ನೋಟಿಸ್ ನೀಡಿದೆ.
ಈ ಕುರಿತಾಫಿ ಪ್ರತಿಕ್ರಿಯಿಸಿರುವ ಕೋರ್ಟ್ ಬಾಲಕಿಯ ವಿಚಾರವಾಗಿ ಯಾವುದೇ ಕನಿಕರ ಇಲ್ಲದೆ ಅವರಾ ಹೆಸರನ್ನು ಪ್ರಕಟಿಸಲಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇದೇ ವಿಚಾರವಾಗಿಯೇ ಮತ್ತೆ ಮೇ 29 ರಂದು ವಿಚಾರಣೆ ನಡೆಯುತ್ತದೆ ಎಂದು ತಿಳಿದುಬಂದಿದೆ.
ಇದಕ್ಕೂ ಮುಂಚೆ ಕತುವಾ ಪ್ರಕರಣದಲ್ಲಿನ ಬಾಲಕಿಯ ಹೆಸರನ್ನು ಬಹಿರಂಗ ಪಡಿಸಿದರೆ 10 ಲಕ್ಷದ ವರೆಗೆ ದಂಡ ವಿದಿಸಲಾಗುತ್ತದೆ ಮತ್ತು ಆರು ತಿಂಗಳಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿತ್ತು.
ಕೋರ್ಟ್ ಏಪ್ರಿಲ್ 13 ರಂದು ಕತುವಾ ಪ್ರಕರಣದಲ್ಲಿನ ಬಾಲಕಿಯ ಹೆಸರು ಪ್ರಕಟಿಸಿದ್ದಕ್ಕೆ ಎಲ್ಲ ಮಾಧ್ಯಮಗಳಿಗೆ ನೋಟಿಸ್ ನೀಡಿತ್ತು.