ನವದೆಹಲಿ: ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ನ ವರದಿಯ ಪ್ರಕಾರ ದೆಹಲಿಯು 527 ರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದ ಮೂಲಕ ವಿಶ್ವದ ಅತ್ಯಂತ ಕಲುಷಿತ ನಗರವಾಗಿದೆ. 161 ಮತ್ತು 153 ರ ಎಕ್ಯೂಐಗಳನ್ನು ಹೊಂದಿರುವ ಕೋಲ್ಕತಾ ಮತ್ತು ಮುಂಬೈಗಳನ್ನು ಕ್ರಮವಾಗಿ ಐದನೇ ಮತ್ತು ಒಂಬತ್ತನೇ ಕಲುಷಿತ ನಗರಗಳೆಂದು ವರದಿಯು ಹೆಸರಿಸಿದೆ. 



COMMERCIAL BREAK
SCROLL TO CONTINUE READING

ಪರಿಸರ ಮಾಲಿನ್ಯ (ನಿಯಂತ್ರಣ ಮತ್ತು ತಡೆಗಟ್ಟುವಿಕೆ) ಪ್ರಾಧಿಕಾರವು (ಇಪಿಸಿಎ) ಗುರುವಾರ ಶಾಲೆಗಳಿಗೆ ಮತ್ತು ಎಲ್ಲಾ ಕೈಗಾರಿಕೆಗಳಿಗೆ ಎರಡು ದಿನಗಳ ಕಾಲ ಮುಚ್ಚುವಂತೆ ಆದೇಶಿಸಿತ್ತು. ಶುಕ್ರವಾರ ಪ್ರಕಟವಾದ ವರದಿಯಲ್ಲಿ, ಸ್ಕೈಮೆಟ್ ದೆಹಲಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಕಳೆದ ಒಂಬತ್ತು ದಿನಗಳಿಂದ ಅಪಾಯಕಾರಿ ಎಂದು ಹೇಳಿದೆ.


ಸ್ಕೈಮೆಟ್ ವರದಿಯು ದೆಹಲಿಯ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಅಪಾಯಕಾರಿ ಕಳಪೆ ಗಾಳಿಯ ಗುಣಮಟ್ಟವನ್ನು ಬಹಿರಂಗಪಡಿಸಿದೆ, ಇದರಲ್ಲಿ ಲೋಧಿ ರಸ್ತೆ ಪ್ರದೇಶ (660 ರ ಎಕ್ಯೂಐ) ಮತ್ತು ಫರಿದಾಬಾದ್ (708 ರ ಎಕ್ಯೂಐ) ಸೇರಿವೆ. ಇನ್ನು ಮೋತಿ ನಗರ (650 ರ ಎಕ್ಯೂಐ) ಮತ್ತು ಪಾಸ್ಚಿಮ್ ವಿಹಾರ್ (629 ರ ಎಕ್ಯೂಐ) ಕೂಡ ಹೆಚ್ಚಿನ ಮಾಲಿನ್ಯವನ್ನು ಹೊಂದಿವೆ.


ಸ್ಕೈಮೆಟ್‌ನ ಪಟ್ಟಿಯಲ್ಲಿರುವ ಇತರ ನಗರಗಳು ಪಾಕಿಸ್ತಾನ, ಚೀನಾ, ವಿಯೆಟ್ನಾಂ ಮತ್ತು ನೇಪಾಳ ದೇಶದ ನಗರಗಳಾಗಿವೆ. ಪಾಕಿಸ್ತಾನದ ಲಾಹೋರ್ ಜಗತ್ತಿನ ಎರಡನೇ ಮಾಲಿನ್ಯ ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.