ನವದೆಹಲಿ: ದೆಹಲಿ ಮೆಟ್ರೋದ ಹಳದಿ(Yellow) ಲೈನ್ ನಲ್ಲಿ ತಾಂತ್ರಿಕ ದೋಷದ ಕಾರಣ ಕೆಲ ಗಂಟೆಗಳು ಮೆಟ್ರೋ ಸ್ಥಗಿತಗೊಂಡಿತ್ತು. ಇದರಿಂದ ತೊಂದರೆಗೊಳಗಾದ ನೂರಾರು ಪ್ರಯಾಣಿಕರು ಮೆಟ್ರೋ ಟ್ರ್ಯಾಕ್ ಮೇಲೆ ಇಳಿದು ಒಂದು ಮೆಟ್ರೋ ನಿಲ್ದಾಣದಿಂದ ಮತ್ತೊಂದು ಮೆಟ್ರೋ ನಿಲ್ದಾಣಕ್ಕೆ ನಡಿಗೆಯಲ್ಲೇ ಸಾಗಬೇಕಾಯಿತು.


COMMERCIAL BREAK
SCROLL TO CONTINUE READING

ದೆಹಲಿ ಮೆಟ್ರೋದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡುಬಂದರೂ ಅದನ್ನು ತಕ್ಷಣವೇ ಸರಿಪಡಿಸಲಾಗುತ್ತದೆ. ಆದರೂ ನಿನ್ನೆ ಬಹಳ ಸಮಯದವರೆಗೂ ಮೆಟ್ರೋ ನಿಂತಿದ್ದರಿಂದ ಪ್ರಯಾಣಿಕರು ಟ್ರ್ಯಾಕ್ ಮೇಲೆ ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ನಡೆಯುವ ಪರಿಸ್ಥಿತಿ ಎದುರಾಗಿತ್ತು. ಈ ದೃಶ್ಯದ ಫೋಟೋ ಮತ್ತು ವಿಡಿಯೋವನ್ನು ಕಂಡವರು ಡ್ರ್ಯಾಗ್ ಮಾಡದೇ ಬಿಡುವರೇ... ಆ ವಿಡಿಯೋವನ್ನು ನೀವೂ ಒಮ್ಮೆ ವೀಕ್ಷಿಸಿ...



ಹೆಚ್ಚು ಜನನಿಬಿಡ ಎಂದು ಪರಿಗಣಿಸಲಾಗಿರುವ ಹಳದಿ ಲೈನ್:
ದೆಹಲಿ ಮೆಟ್ರೋದಲ್ಲಿ ಹಳದಿ ಲೈನ್ ಅನ್ನು ಹೆಚ್ಚು ಜನನಿಬಿಡ ಲೈನ್ ಎಂದು ಪರಿಗಣಿಸಲಾಗಿದೆ. ಈ ಮಾರ್ಗವು ದೆಹಲಿಯ ಸಮಯ್ಪುರ್ ಅನ್ನು ಹರಿಯಾಣದ ಹುಡಾ ಸಿಟಿ ಸೆಂಟರ್ ಜೊತೆಗೆ ಸಂಪರ್ಕಿಸುತ್ತದೆ. ಹರಿಯಾಣವನ್ನು ದೆಹಲಿಯೊಂದಿಗೆ ಸಂಪರ್ಕಿಸುವ ಈ ಲೈನ್ ನಲ್ಲಿ ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಮಂಗಳವಾರ ಈ ಲೈನ್ ನಲ್ಲಿ ಮಾರ್ಗ ಮಧ್ಯೆ ಮೆತ್ರೋದಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣ ಜನರು ತಾವು ತೆರಳಬೇಕಿದ್ದ ಸ್ಥಳವನ್ನು ತಲುಪುವಲ್ಲಿ ತೊಂದರೆ ಅನುಭವಿಸಬೇಕಾಯಿತು. ಕೆಲ ಪ್ರಯಾಣಿಕರು ಕುತುಬ್ ಮಿನಾರ್ ನಿಲ್ದಾಣದಲ್ಲಿ ಸಿಲುಕಿದರೆ, ಮತ್ತೆ ಕೆಲವರು ಕಚೇರಿಗಳಿಗೆ ತೆರಳಬೇಕಿದ್ದ ಅನಿವಾರ್ಯತೆಯಿಂದಾಗಿ ಟ್ರ್ಯಾಕ್ ಮೇಲೆ ತೆರಳಿದರು.



ಮಾರ್ಗ ಮಧ್ಯದಲ್ಲಿ ಕೆಲವರು ಅಲ್ಲೇ ಲ್ಯಾಪ್ ಟಾಪ್ ತೆಗೆದು ಕೆಲಸ ಮಾಡುತ್ತಿದ್ದ ದೃಶ್ಯವೂ ಕಂಡು ಬಂದಿತು. ಮೆಟ್ರೋ ಟ್ರ್ಯಾಕ್ ಮೇಲೆ ನಡೆದು ಬರುತ್ತಿದ್ದ ಜನಸಾಗರವನ್ನು ಕಂಡು ಮತ್ತೊಂದು ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರು ಅದನ್ನು ಚಿತ್ರೀಕರಿಸಿದ್ದಾರೆ. ವೀಡಿಯೊ ವೀಕ್ಷಿಸಿ ...





ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಆರ್ ಸಿ ಅಧಿಕಾರಿಗಳು, ಸುಲ್ತಾನ್ ಪುರ್ ನಿಲ್ದಾಣದಲ್ಲಿ ನಡೆಯುತ್ತಿರುವ ತಂತಿ (ಓವರ್ಹೆಡ್ ವೈರ್ ಅಥವಾ ಒಹೆಚ್ಇ) ಸ್ಥಗಿತದ ಕಾರಣ, ಬೆಳಿಗ್ಗೆ 9.30 ರ ವೇಳೆಗೆ ರೈಲು ಸೇವೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.