ನವದೆಹಲಿ: ದೇಶೀಯ ಪ್ರವಾಸಿಗರು ನವೆಂಬರ್ ನಲ್ಲಿ ದೇಶದ ಎರಡು ಬೃಹತ್ ವಿಮಾನ ನಿಲ್ದಾಣಗಳಲ್ಲಿ ಪ್ರಮುಖ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಎರಡೂ ವಿಮಾನ ನಿಲ್ದಾಣಗಳು ಮುಂಬೈ ಮತ್ತು ನವ ದೆಹಲಿ ವಿಮಾನ ನಿಲ್ದಾಣಗಳಾಗಿವೆ. ಏರ್ಪೋರ್ಟ್ ಆಡಳಿತ ಮಂಡಳಿಯು ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ರನ್ ವೇ ರಿಪೇರಿ ಮಾಡಲು ನಿರ್ಧರಿಸಿದ್ದು, ಈ ಎರಡು ವಿಮಾನ ನಿಲ್ದಾಣಗಳಲ್ಲಿ  ಮುಂದಿನ ನಾಲ್ಕು ತಿಂಗಳವರೆಗೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ಪ್ರಯಾಣಿಕರಿಗೆ ವಿಮಾನ ತಡವಾಗುವುದು, ಅಲ್ಲದೆ ವಿಮಾನ ದರ ಹೆಚ್ಚಾಗುವಿಕೆ(ದುಬಾರಿ ಟಿಕೆಟ್) ಗೆ ಇದು ಅವಕಾಶ ನೀಡುತ್ತದೆ. ರನ್ ವೇ ದುರಸ್ತಿ ಮಾಡುವ ಮೂಲಕ ಸುಮಾರು 2000 ವಿಮಾನಗಳನ್ನು ರದ್ದುಗೊಳಿಸಲಾಗುವುದು ಅಥವಾ ಮರುಹೊಂದಿಸಲಾಗುವುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


13 ದಿನಗಳವರೆಗೆ ಬಂದ್ ಆಗಲಿದೆ ದೆಹಲಿ ವಿಮಾನ ನಿಲ್ದಾಣ:
2018 ರ ನವೆಂಬರ್ನಲ್ಲಿ 13 ದಿನಗಳ ಕಾಲ ದೆಹಲಿ ವಿಮಾನ ನಿಲ್ದಾಣದಲ್ಲಿ ರನ್ ವೇ ಅನ್ನು ಮುಚ್ಚಲಾಗುವುದು. ಮುಂಬೈ ವಿಮಾನ ನಿಲ್ದಾಣವು ಫೆಬ್ರವರಿ 7, 2019 ರಿಂದ ಮಾರ್ಚ್ 2019 ರವರೆಗೆ ಕೆಲವು ಗಂಟೆಗಳವರೆಗೆ ಮುಚ್ಚಲಿದೆ. ಇಟಿ ವರದಿಯ ಪ್ರಕಾರ ದೆಹಲಿಯಲ್ಲಿ ಸುಮಾರು 1300 ವಿಮಾನಗಳ ಮೇಲೆ ಈ ರಿಪೇರಿ ಕೆಲಸದ ಪರಿಣಾಮ ಬೀರುತ್ತವೆ. ಮುಂಬೈನಲ್ಲಿ 700 ವಿಮಾನಗಳ ಮೇಲೆ ಇದರ ಪರಿಣಾಮ ಬೀರುತ್ತದೆ. ಆದಾಗ್ಯೂ, ವಿಮಾನನಿಲ್ದಾಣ ನಿರ್ವಾಹಕರು ಈ ಬಗ್ಗೆ ನಿಖರವಾದ ಮಾಹಿತಿ ತಿಳಿಸಿಲ್ಲ.


.


ದೇಶೀಯ ವಿಮಾನಗಳ ಮೇಲೆ ಹೆಚ್ಚು ಪರಿಣಾಮ:
ಈ ಅವಧಿಯಲ್ಲಿ ದೇಶೀಯ ವಿಮಾನಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ಏರ್ಲೈನ್ ಕಾರ್ಯನಿರ್ವಾಹಕರು ಹೇಳಿದರು. ಕೆಲವು ವಿಮಾನಗಳ ಹಾರಾಟ ರದ್ದುಗೊಳ್ಳಲಿರುವುದರಿಂದ ಈ ಅವಧಿಯಲ್ಲಿ ಏರ್ ಟಿಕೆಟ್ಗಳು ದುಬಾರಿಯಾಗಬಹುದು. ರನ್ ವೇ ತುಂಬಾ ಹಳೆಯದಾಗಿದ್ದು, ದುರಸ್ತಿ ಕಾರ್ಯ ಅಗತ್ಯವಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ಹೇಳುತ್ತಾರೆ. ಎಲ್ಲಾ ಷೇರುದಾರರ ಅನುಮೋದನೆಯ ನಂತರ ರಿಪೇರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.


ಯಾವ ವಿಮಾನ ನಿಲ್ದಾಣಗಳನ್ನು ದುರಸ್ತಿ ಮಾಡಲಾಗುತ್ತದೆ:
ದೆಹಲಿ ವಿಮಾನ ನಿಲ್ದಾಣವು 3 ರನ್ವೇಗಳನ್ನು ಹೊಂದಿದೆ. ಹಳೆಯದಾದ ರನ್ವೇ 27 ಅನ್ನು ಮುಚ್ಚಲಾಗುವುದು. ಟರ್ಮಿನಲ್ 1 D ಅನ್ನು ವಿಮಾನವನ್ನು ಇಳಿಯಲು/ಇಳಿಸಲು ಬಳಸಲಾಗುತ್ತದೆ. ಇದರ ದುರಸ್ತಿ ನವೆಂಬರ್ 15 ರಂದು ಪ್ರಾರಂಭವಾಗುತ್ತದೆ. ಇದು ದಿನನಿತ್ಯದ 100 ವಿಮಾನಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ, ಫೆಬ್ರವರಿ ಮತ್ತು ಮಾರ್ಚ್ 2019 ರ ನಡುವೆ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಮುಂಬೈಯಲ್ಲಿ ರನ್ ವೇ ಮುಚ್ಚಲಾಗುವುದು.