ಪ್ರಧಾನಿ ಮೋದಿ ಭೇಟಿಯಾದ ಒಡಿಶಾ ಸಿಎಂ ಪಟ್ನಾಯಕ್: 5,000 ಕೋಟಿ ರೂ. ವಿಶೇಷ ಪ್ಯಾಕೇಜ್ಗೆ ಮನವಿ
ಪಟ್ನಾಯಕ್ ಕೋರಿರುವ ನೆರವು ಪ್ಯಾಕೇಜ್ ಏಪ್ರಿಲ್ ಅಂತ್ಯದಲ್ಲಿ ಫಾನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಆಗಿದೆ.
ನವದೆಹಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಫಾನಿ ಚಂಡಮಾರುತದಿಂದ ಒಡಿಶಾಕ್ಕೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯಕ್ಕೆ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ.
ಪಟ್ನಾಯಕ್ ಕೋರಿರುವ ನೆರವು ಪ್ಯಾಕೇಜ್ ಏಪ್ರಿಲ್ ಅಂತ್ಯದಲ್ಲಿ ಫಾನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಆಗಿದೆ. ಪ್ರಧಾನಿ ಮೋದಿ ಅವರೊಂದಿಗಿನ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪಟ್ನಾಯಕ್, ಈ ವೇಳೆ ಚಂಡಮಾರುತದಿಂದ ಸ್ಥಳಾಂತರಿಸಿದ ಜನರಿಗೆ ಐದು ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಲು ಸಹಕರಿಸುವಂತೆ ಕೋರಿದರು.
2013 ರಲ್ಲಿ ಫಾಯಿಲಿನ್ ಚಂಡಮಾರುತ ಒಡಿಶಾವನ್ನು ಅಪ್ಪಳಿಸಿದ್ದಾಗ 60 ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಆಸ್ತಿ ಹಾನಿ ಸುಮಾರು 525 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆ ಸಮಯದಲ್ಲಿ ಸಿಎಂ ನವೀನ ಪಟ್ನಾಯಕ್ ಅವರ ಸರ್ಕಾರ ಅದನ್ನು ನಿರ್ವಹಿಸಿದ ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಂಡಮಾರುತದಿಂದ ಬೀದಿ ಪಾಲಾಗಿದ್ದ ಜನರನ್ನು ಮತ್ತೆ ಸಾಮಾನ್ಯ ಜೀವನಕ್ಕೆ ತರಲು ಪಟ್ನಾಯಕ್ ಅವರ ಸರ್ಕಾರ ಬಹಳ ಶ್ರಮಿಸಿತು.