ನವದೆಹಲಿ : ಗುಜರಾತ್ನ್ ನೂತನ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾಣಿ ಅವರು ಮಂಗಳವಾರ ಭಾಗವಹಿಸಬೇಕಿದ್ದ ಸಾರ್ವಜನಿಕ ಸಭೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸೆಕ್ಷನ್ 144 ರ ಅಡಿಯಲ್ಲಿ ಸಭೆಗೆ ಅನುಮತಿಯನ್ನು ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಗಣರಾಜ್ಯೋತ್ಸವ ಇರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 


ನಿಗದಿತ ಸಾರ್ವಜನಿಕ ಸಭೆಯಲ್ಲಿ ಭೂಮಿ, ಘನತೆ ಮತ್ತು ಶಿಕ್ಷಣ ಮುಂತಾದ ಸಮಸ್ಯೆಗಳನ್ನು ಜಿಗ್ನೀಶ್ ಎತ್ತಿಹಿಡಿಯುವ ಸಾಧ್ಯತೆಯಿತ್ತು.



ಈ ಹಿಂದೆ, ಜನವರಿ 4 ರಂದು ಮುಂಬೈ ಪೊಲೀಸರು ಮೇವಾನಿ ಮತ್ತು ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಭಾಗವಹಿಸಲಿದ್ದ ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಿಸಿದ್ದರು. ಇದರಿಂದಾಗಿ ಸಭೆಗೆ ಅನುಮತಿ ನಿರಾಕರಿಸಿದ ಪೋಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನೂ ಪೊಲೀಸರು ಬಂಧಿಸಿದ್ದರು.



ಅಲ್ಲದೆ, ಸಭೆಯ ಸಂಘಕರಾದ ಚಂದ್ರ ಭಾರತಿಯ ಅಧ್ಯಕ್ಷ ಸಚಿನ್ ಬನ್ಸೋಡ್, ಉಪಾಧ್ಯಕ್ಷ ಸಾಗರ್ ಭಲೇರಾವ್ ಮತ್ತು ಎಂಎಲ್'ಸಿ ಕಪಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಅಲ್ಲದೆ, ಡಿಸೆಂಬರ್ 31 ರಂದು ಪುಣೆನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಪ್ರಚೋದನಕಾರಿ' ಭಾಷಣ ನೀಡಿದ್ದಾರೆ ಎಂದು ಆರೋಪಿಸಿ ಮೆವಾನಿ ಮತ್ತು ಖಲೀದ್ ವಿರುದ್ಧ ದೂರು ದಾಖಲಾಗಿರುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ.