ನವದೆಹಲಿ: ದೆಹಲಿಯ ಪಹಾರ್ಗಂಜ್ ಪ್ರದೇಶದಲ್ಲಿ ಅಡಗಿರುವ ಇಬ್ಬರು ಭಯೋತ್ಪಾದಕರ ಪೋಟೋವನ್ನು ದೆಹಲಿ ಪೊಲೀಸರು ಮಂಗಳವಾರದಂದು ಬಿಡುಗಡೆ ಮಾಡಿದ್ದಾರೆ.

COMMERCIAL BREAK
SCROLL TO CONTINUE READING

ಒಂದು ವೇಳೆ ಈ ಇಬ್ಬರು ಉಗ್ರರನ್ನು ಕಂಡಲ್ಲಿ ಅಥವಾ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಕಂಡುಬಂದಲ್ಲಿ ದೆಹಲಿ ಪೊಲೀಸರು ಪಹಾರ್ಗಂಜ್ ಪೊಲೀಸ್ ಠಾಣೆಗೆ ವರದಿ ಮಾಡಲು ಜನರಿಗೆ ಮನವಿ ಮಾಡಿದ್ದಾರೆ. ಈ ಇಬ್ಬರು ಭಯೋತ್ಪಾದಕರ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಈ ಎರಡು ದೂರವಾಣಿ ಸಂಖ್ಯೆಗಳನ್ನು ದೆಹಲಿ ಪೊಲೀಸರು ಹಂಚಿಕೊಂಡಿದ್ದಾರೆ- 011-23520787, 011- 2352474.


ಕಳೆದ ತಿಂಗಳು ಪುಲ್ವಾಮಾದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಇನ್ಸ್ಪೆಕ್ಟರ್ ಇಮಿಯಾಝ್ ಅಲಿ ಅಹ್ಮದ್ ಮಿರ್ ಹತ್ಯೆ ಪ್ರಕರಣದಲ್ಲಿ ಹಿಜ್ಬುಲ್ ಮುಜಾಹಿದೀನ್ ಪಾತ್ರ ಕಂಡು ಬಂದ ನಂತರ ದೆಹಲಿ ಪೊಲೀಸರ ವಿಶೇಷ ಸೆಲ್ ಈ ಇಬ್ಬರು ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಿದೆ.ವರದಿಗಳ ಪ್ರಕಾರ, ಬಂಧಿತ ಉಗ್ರನನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಅನ್ಸರ್-ಉಲ್ ಹಕ್ ಎಂದು ಗುರುತಿಸಲಾಗಿದೆ.