ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೋಲೀಸರ ಕೈಗೆ ಭಾರಿ ಯಶಸ್ಸು ದೊರೆತಿದೆ. ದೆಹಲಿ ಪೊಲೀಸರು (Delhi Police) ಐವರು ಉಗ್ರರನ್ನು ಬಂಧಿಸಿದ್ದಾರೆ. ಇದೆ ವೇಳೆ ಈ ಭಯೋತ್ಪಾದಕರು ನಡೆಸಿದ್ದ ಪಿತೂರಿಯನ್ನು ಕೂಡ ವಿಫಲಗೊಳಿಸಲಾಗಿದೆ. ದೆಹಲಿ ಪೋಲೀಸರ ವಿಶೇಷ ಸೆಲ್ ಶಾಕರ್ ಪುರ್ ನಲ್ಲಿ ಎನ್ಕೌಂಟರ್ ನಡೆಸುವ ಮೂಲಕ ಈ ಉಗ್ರರನ್ನು ಬಂಧಿಸಿದ್ದಾರೆ. ಜೊತೆಗೆ ಬಂಧಿತ ಉಗ್ರರ ಬಳಿಯಿಂದ ಶಸ್ತ್ರಾಸ್ತ್ರ ಹಾಗೂ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.


ಮೋಸ ಹೋದರೆ ಡಾಬವಾಲೆ ಬಾಬಾ, ಯುಟ್ಯೂಬರ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕಾಂತಾ ಪ್ರಸಾದ್


COMMERCIAL BREAK
SCROLL TO CONTINUE READING

ಈ ಎನ್ಕೌಂಟರ್ ಕುರಿತು ಮಾಹಿತಿ ನೀಡಿರುವ DCP ಸ್ಪೆಷಲ್ ಸೆಲ್ ಪ್ರಮೋದ್ ಖುಷ್ವಾಹ್, ದೆಹಲಿಯ ಶಾಕರಪುರ್ ಪ್ರದೇಶದಲ್ಲಿ ಎನ್ಕೌಂಟರ್ ಬಳಿಕ ಐವರು ಉಗ್ರರನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಉಗ್ರರು ಪಂಜಾಬ್ ಗೆ ಸೇರಿದ್ದಾರೆ ಉಳಿದ ಮೂವರು ಕಾಶ್ಮೀರ್  ಮೂಲದವರಾಗಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ನಾರ್ಕೋ ಭಯೋತ್ಪಾದನೆಗಾಗಿ ಈ ಉಗ್ರರಿಗೆ ISI ಬೆಂಬಲ ನೀಡಿತ್ತು. ಆದರೆ ಉಗ್ರ ಸಂಘಟನೆಯ ಹೆಸರು ಇನ್ನೂ ಬಹಿರಂಗವಾಗಿಲ್ಲ ಎಂದು ಹೇಳಿದ್ದಾರೆ.


ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ
ದೆಹಲಿಯ ಜಮನಾ ಪಾರ್ ಪ್ರದೇಶದಲ್ಲಿ ಕೆಲ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಪೋಲೀಸರ ಕೈಸೇರಿತ್ತು. ಬಳಿಕ ಅಲ್ಲಿ ದಾಳಿ ನಡೆಸಿದ ಪೋಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆಸಲಾಗಿದೆ. ಆದೆ, ಕೊನೆಗೆ ಪೊಲೀಸರು ಐವರು ಉಗ್ರರನ್ನು  ಬಂಧಿಸಿದ್ದಾರೆ. ಸದ್ಯ ಉಗ್ರರ ವಿಚಾರಣೆ ನಡೆಸಲಾಗುತ್ತಿದೆ.


ಇದನ್ನು ಓದಿ-ಆನ್ ಲೈನ್ ಶಿಕ್ಷಣ ಪಡೆಯಲು ಕಷ್ಟವಾಗಿರುವ ಮಕ್ಕಳ ನೆರವಿಗೆ ಬಂದ ಪೋಲಿಸ್!


ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಉಗ್ರರು ದೊಡ್ಡ ಉಗ್ರಸಂಘಟನೆಯ ಜೊತೆಗೆ ಸಂಪರ್ಕಹೊಂದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ದೆಹಲಿ ಪೊಲೀಸರು ಈ ಉಗ್ರರ ವಿಚಾರಣೆ ನಡೆಸಲಿದ್ದಾರೆ. ಖಲಿಸ್ತಾನ್ ಉಗ್ರರ ಜೊತೆಗೆ ಈ ಉಗ್ರರು ಸಂಪರ್ಕ ಹೊಂದಿದ್ದಾರೆಯೇ ಎಂಬುದರ ಕುರಿತು ಕೂಡ ಪೊಲೀಸರು ಮಾಹಿತಿ ಕಲೆಹಾಕಲಿದ್ದಾರೆ. 


ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಈ ಪ್ರತಿಭಟನೆಯ ಮೇಲೆ ಗುಪ್ತಚರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಈ ವೇಳೆ ದೆಹಲಿಯಲ್ಲೂ ಉಗ್ರ ಚಟುವಟಿಕೆಗಳು ಸಕ್ರೀಯಗೊಂಡ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ. ಬಳಿಕ ಈ ಕಾರ್ಯಾಚರಣೆ ನಡೆಸಲಾಗಿದೆ.