ಬಡವರಿಗೆ ಉಚಿತ ಚಿಕಿತ್ಸೆ ನೀಡಲು ದೆಹಲಿ ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ಆದೇಶ
ಈ ನಿಯಮವನ್ನು ಖಾಸಗಿ ಆಸ್ಪತ್ರೆಗಳು ವಿರೋಧಿಸಲು ಪ್ರಯತ್ನಿಸಿದರೆ ಅದು ಅವರ ಗುತ್ತಿಗೆಗೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನವದೆಹಲಿ: ಸರ್ಕಾರದಿಂದ ಅನುದಾನಿತ ಭೂಮಿ ಪಡೆದ ಖಾಸಗಿ ಆಸ್ಪತ್ರೆಗಳು ದುರ್ಬಲ ವರ್ಗದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.
ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಥವಾ ಕಾರ್ಯನಿರ್ವಹಿಸಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡಿಮೆ ದರದಲ್ಲಿ ಸರ್ಕಾರದಿಂದ ಭೂಮಿಯನ್ನು ಪಡೆದಿದ್ದು, ಹೊರ ರೋಗಿ(ಒಪಿಡಿ)ಗಳ ವಿಭಾಗದಲ್ಲಿ ಶೇ.25ರಷ್ಟು ಹೊರ ರೋಗಿಗಳಿಗೆ ಮತ್ತು ಒಳರೋಗಿ ವಿಭಾಗ(ಐಪಿಡಿ)ದ ಶೇ.10ರಷ್ಟು ಬಡ ವರ್ಗದವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಸುಪ್ರೀಂ ಆದೇಶಿಸಿದೆ.
ಅಲ್ಲದೆ, ಈ ನಿಯಮವನ್ನು ಖಾಸಗಿ ಆಸ್ಪತ್ರೆಗಳು ವಿರೋಧಿಸಲು ಪ್ರಯತ್ನಿಸಿದರೆ ಅದು ಅವರ ಗುತ್ತಿಗೆಗೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ವಿಷಯದ ಬಗ್ಗೆ ದೆಹಲಿ ಸರ್ಕಾರದಿಂದ ನಿಯತಕಾಲಿಕ ವರದಿಗಳನ್ನು ಉನ್ನತ ನ್ಯಾಯಾಲಯವು ಕೋರಿದೆ.