ದೆಹಲಿ ಶೂಟರ್ ನನ್ನು14 ದಿನ ರಕ್ಷಣಾತ್ಮಕ ಕಸ್ಟಡಿಗೆ ಕಳಿಸಿದ ಕೋರ್ಟ್
ದೆಹಲಿಯ ಜಾಮಿಯಾ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರ ಮೇಲೆ ಗುರುವಾರ ಗುಂಡು ಹಾರಿಸಿದ 17 ವರ್ಷದ ಶೂಟರ್ ಅನ್ನು ದೆಹಲಿ ನ್ಯಾಯಾಲಯವು 14 ದಿನಗಳ ರಕ್ಷಣಾತ್ಮಕ ಕಸ್ಟಡಿಗೆ ಕಳುಹಿಸಿದೆ.
ನವದೆಹಲಿ: ದೆಹಲಿಯ ಜಾಮಿಯಾ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರ ಮೇಲೆ ಗುರುವಾರ ಗುಂಡು ಹಾರಿಸಿದ 17 ವರ್ಷದ ಶೂಟರ್ ಅನ್ನು ದೆಹಲಿ ನ್ಯಾಯಾಲಯವು 14 ದಿನಗಳ ರಕ್ಷಣಾತ್ಮಕ ಕಸ್ಟಡಿಗೆ ಕಳುಹಿಸಿದೆ.
ದೆಹಲಿ ಪೊಲೀಸರ ಅಪರಾಧ ವಿಭಾಗವು ಏತನ್ಮಧ್ಯೆ, ಜಾಮಿಯಾ ಶೂಟರ್ ಅವರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಆಸಿಫಿಕೇಷನ್ ಪರೀಕ್ಷೆಯನ್ನು ನಡೆಸಲು ಅರ್ಜಿ ಸಲ್ಲಿಸಿದೆ. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ವಾಸವಾಗಿರುವ 17 ವರ್ಷದ ಅಪ್ರಾಪ್ತ ವಯಸ್ಕ ಎಂದು ತಿಳಿದುಬಂದಿದೆ.ಈ ಹಿನ್ನಲೆಯಲ್ಲಿ ಇದನ್ನು ಖಚಿತಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ, ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಹಗಲು ಹೊತ್ತಿನಲ್ಲಿ ಅಲ್ಲಿ ನಿಯೋಜಿಸಲಾದ ಪೊಲೀಸರ ಸಮ್ಮುಖದಲ್ಲಿ ಗುಂಡು ಹಾರಿಸುವ ಮೂಲಕ ಶೂಟರ್ ಭೀತಿಯನ್ನು ಹುಟ್ಟುಹಾಕಿದ್ದರು.
ಟೆಲಿವಿಷನ್ ಕ್ಯಾಮೆರಾಗಳಿಂದ ಸೆರೆಹಿಡಿಯಲ್ಪಟ್ಟ ಇಡೀ ಘಟನೆಯು ಯುವಕನನ್ನು ತಿಳಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಜಾಕೆಟ್ ಧರಿಸಿ, ಪೊಲೀಸರು ಬ್ಯಾರಿಕೇಡ್ ಮಾಡಿದ ಖಾಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ತೋರಿಸಿ, ಹಿಂದಕ್ಕೆ ತಿರುಗಿ ಹಿಂದಿಯಲ್ಲಿ ಪ್ರತಿಭಟನಾಕಾರರನ್ನು ಕೂಗುತ್ತಾ, ತಗೋ ಅಜಾದಿ ಎಂದು ಗುಂಡು ಹಾರಿಸುತ್ತಿರುವುದು ಸೆರೆಯಾಗಿದೆ.
ಈ ಘಟನೆಯು ಪೋಲೀಸರ ಸಮ್ಮುಖದಲ್ಲಿಯೇ ನಡೆದಿದ್ದು, ಶೂಟರ್ ಜಾಮಿಯಾ ವಿದ್ಯಾರ್ಥಿ ಮೇಲೆ ಶೂಟ್ ಮಾಡಿದ ನಂತರ ಅವನನ್ನು ವಶಕ್ಕೆ ತಗೆದುಕೊಂಡಿದ್ದಾರೆ.
.