ರಾಜೀವ್ ಗಾಂಧಿ ಕುರಿತ ಮೋದಿ ಹೇಳಿಕೆ ಖಂಡಿಸಿ 200ಕ್ಕೂ ಅಧಿಕ ದೆಹಲಿ ವಿವಿ ಪ್ರಾಧ್ಯಾಪಕರ ಪತ್ರ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಇತ್ತೀಚಿಗೆ ಪ್ರಧಾನಮಂತ್ರಿ ಮೋದಿ ನೀಡಿದ್ದ ಹೇಳಿಕೆ ಖಂಡಿಸಿ ದೆಹಲಿ ವಿಶ್ವವಿದ್ಯಾನಿಲಯದ 200ಕ್ಕೂ ಅಧಿಕ ಪ್ರಾಧ್ಯಾಪಕರು ಪತ್ರ ಬರೆದಿದ್ದಾರೆ.
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಇತ್ತೀಚಿಗೆ ಪ್ರಧಾನಮಂತ್ರಿ ಮೋದಿ ನೀಡಿದ್ದ ಹೇಳಿಕೆ ಖಂಡಿಸಿ ದೆಹಲಿ ವಿಶ್ವವಿದ್ಯಾನಿಲಯದ 200ಕ್ಕೂ ಅಧಿಕ ಪ್ರಾಧ್ಯಾಪಕರು ಪತ್ರ ಬರೆದಿದ್ದಾರೆ.
ಈಗ ಪ್ರಾಧ್ಯಾಪಕರ ಸಹಿಗಳನ್ನು ಒಳಗೊಂಡ ಪತ್ರವನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "200 ಕ್ಕೂ ಅಧಿಕ ದೆಹಲಿ ವಿವಿ ಪ್ರಾಧ್ಯಾಪಕರು ರಾಜೀವ್ ಗಾಂಧಿಯವರ ಕುರಿತ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಖಂಡಿಸಿ ಸಹಿಗಳನ್ನೋಳಗೊಂಡ ಪತ್ರವನ್ನು ಬರೆದಿದ್ದಾರೆ.ಅವುಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಾಧ್ಯಾಪಕರ ಸಹಿಗಳನ್ನೋಳಗೊಂಡ ಪತ್ರದಲ್ಲಿ "ನಾವು ದೆಹಲಿ ವಿವಿಯ ಶಿಕ್ಷಕರಾಗಿದ್ದು ಪ್ರಧಾನಿ ಮೋದಿಯವರು ಇತ್ತಿಚಿಗೆ ರಾಜೀವ್ ಗಾಂಧಿ ಅವರನ್ನು ಕುರಿತ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ" ಎಂದು ಬರೆಯಲಾಗಿದೆ. ಕಾರ್ಗಿಲ್ ಆಕ್ರಮಣಕಾರರನ್ನು ಭಾರತ ಸೋಲಿಸಿದಾಗ ನಮ್ಮ ಸೈನಿಕರು ಬೋಪೋರ್ಸ್ ಗನ್ ಗಾಗಿ ದಶಕದ ಹಿಂದೆ ಹುತಾತ್ಮ ರಾಗಿದ್ದ ರಾಜೀವ್ ಗಾಂಧಿ ಪರವಾದ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯನ್ನು ತರುವುದರ ಮೂಲಕ ರೈಲ್ವೆಯಲ್ಲಿ ಎಲ್ಲವನ್ನು ಕಂಪ್ಯೂಟರಿಕರಣವನ್ನು ತಂದರು ಎಂದು ದೆಹಲಿ ವಿವಿ ಶಿಕ್ಷಕರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿಯವರ ಬಗ್ಗೆ ಮೋದಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಪ್ರಧಾನಿ ಕಚೇರಿ ಘನತೆಯನ್ನು ಕುಂದಿಸಿದ್ದಾರೆ ಎಂದು ಹೇಳಿದ್ದಾರೆ.