ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಇದೀಗ ಬಾಲಿವುಡ್ ಸೆಲಿಬ್ರಿಟಿಗಳು ಕೂಡ ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಆರಂಭಿಸಿದ್ದಾರೆ. ಇದೀಗ ಈ ಸರದಿಗೆ ಖ್ಯಾತ ನಟಿ ದಿವ್ಯಾ ದತ್ತಾ ಕೂಡ ಶಾಮೀಲಾಗಿದ್ದು, ಟ್ವೀಟ್ ಮೂಲಕ ಜನರನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿವ್ಯಾ, ನೀವು ಯಾವ ಧರ್ಮವನ್ನು ಪಾಲಿಸುತ್ತಿರೋ ಆ ಧರ್ಮ ಮಾನವತೆಗಿಂತ ಹೆಚ್ಚಾಗಿದೆಯೇ? ನಿಜವಾಗಿಯೂ? ದುಃಖಕರ ಮತ್ತು ಆಘಾತಕಾರಿ. ನಾವು ಸಾರೆ ಜಹಾನ್ ಸೆ ಅಚ್ಛಾ ಹಿಂದೊಸತಾ ಹಮಾರಾ .. ಹಾಡನ್ನು ಕೇಳುತ್ತ ಬೆಳೆದಿದ್ದೇವೆ. ಸದ್ಯ ನಡೆಯುತ್ತಿರುವುದಾದರೂ ಎಂದು ಗೆಳೆಯರೇ? ಇದೆಲ್ಲಾ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟ ಜನರ ಸಂಖ್ಯೆ 34ಕ್ಕೆ ತಲುಪಿದೆ. ಇನ್ನೊಂದೆಗೆ ಈ ಹಿಂಸಾಚಾರದಲ್ಲಿ ಇದುವರೆಗೆ 200 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ಡೋಭಾಲ್ ಅವರಿಗೆ ಈಶಾನ್ಯ ದೆಹಲಿಯ ಸ್ಥಿತಿಯತ್ತ ಗಮನ ಹರಿಸಲು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಬುಧವಾರ ಹಿಂಸಾಚಾರಕ್ಕೆ ಒಳಗಾಗಿರುವ ಜಾಫ್ರಾಬಾದ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜೀತ್ ಡೋಭಾಲ್, ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪೀಡಿತ ಜನರು ನಮ್ಮ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರಿಗೆ ಮಾಹಿತಿ ನೀಡಿದ್ದಾರೆ.


ಈ ವೇಳೆ ಜನರಿಗೆ ಜನರಿಗೆ ಮನವರಿಕೆ ಮಾಡಿಕೊಟ್ಟ NSA ನಿಮ್ಮ ಸುರಕ್ಷತೆಗೆ ನಾವು ಪ್ರಾಣ ನೀಡಲು ಕೂಡ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ. ನೀವು ಸುರಕ್ಷಿತವಾಗಿ ಇರುವವರೆಗೆ ನಿಮ್ಮ ನೆರೆಹೊರೆಯವರು ಕೂಡ ಸುರಕ್ಷಿತರಾಗಿದ್ದಾರೆ. ಸೌಹಾರ್ದತೆಯನ್ನು ಕಾಪಾಡಿ ಮತ್ತು ನಿಮಗೆ ಹೆದರುವ ಅವಶ್ಯಕತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ನನಗೆ ಇಲ್ಲಿ ಕಳುಹಿಸಿದ್ದು, ನೀವು ಹೆದರಬೇಡಿ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದಿದ್ದರು. ಇದಕ್ಕೂ ಮೊದಲು ಬುಧವಾರ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದರು. ಅಷ್ಟೇ ಅಲ್ಲ ದೆಹಲಿಯ ವಿವಿಧ ಭಾಗಗಳಲ್ಲಿನ ಇರುವ ಪರಿಸ್ಥಿತಿ ಕುರಿತು ವಿಸ್ತೃತ ಸಮೀಕ್ಷೆ ನಡೆಸಲಾಗಿದ್ದು, ಪೊಲೀಸರು ಹಾಗೂ ಇತರೆ ಏಜೆನ್ಸಿಗಳು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದ್ದರು.