ನವದೆಹಲಿ: ಈಶಾನ್ಯ ದೆಹಲಿಯಲ್ಲಿ ವಿವಾದಿತ ಪೌರತ್ವ ಕಾನೂನಿನ ವಿರುದ್ಧ ನಡೆದ ಹಿಂಸಾಚಾರದಲ್ಲಿ 10 ಜನರು ಸಾವನ್ನಪ್ಪಿದ್ದರೆ 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೋಮವಾರದಿಂದ ಪ್ರಾರಂಭವಾದ ದುಷ್ಕರ್ಮಿಗಳ ಅಟ್ಟಹಾಸ ಮಂಗಳವಾರವೂ ಮುಂದುವರೆದಿದೆ. ಮಂಗಳವಾರ ಈ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ ಭುಗಿಲೆದ್ದ ದಂಗಲ್ ನಿಂದಾಗಿ ಮಂಗಳವಾರ (ಫೆಬ್ರವರಿ 26) ಈಶಾನ್ಯ ದೆಹಲಿಯ ಎಲ್ಲಾ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದರು. ಅಂದರೆ, ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ತೆರೆಯುವುದಿಲ್ಲ ಎಂದು ಹೇಳಿದ್ದರು.



ಇದಲ್ಲದೆ, ಎಲ್ಲಾ ಶಾಲೆಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು. ಮಂಡಳಿಯ ಪರೀಕ್ಷೆಗಳನ್ನು ಮುಂದೂಡಬೇಕೆಂದು ಮನೀಶ್ ಸಿಸೋಡಿಯಾ ಮತ್ತೊಮ್ಮೆ ಸಿಬಿಎಸ್‌ಇಗೆ ಮನವಿ ಮಾಡಿದ್ದಾರೆ. ಈ ಮೊದಲು ಸೋಮವಾರ (ಫೆಬ್ರವರಿ 24) ಮನೀಶ್ ಸಿಸೋಡಿಯಾ ಈ ಪ್ರದೇಶದ ಶಾಲೆಗಳಿಗೆ ರಜೆ ಘೋಷಿಸಿದರು.


ಇಂದು ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.



ಇಂದು ಪರೀಕ್ಷೆ ನಡೆಯಬೇಕಿದ್ದ ಶಾಲೆಗಳ ಪಟ್ಟಿಯನ್ನು ಸಿಬಿಎಸ್‌ಇ ಬಿಡುಗಡೆ ಮಾಡಿದೆ. ಇಂದು, ಸಿಬಿಎಸ್‌ಇಯ 10 ನೇ ತರಗತಿ ಇಂಗ್ಲಿಷ್ ಮತ್ತು 12 ನೇ ವೆಬ್ ಅಪ್ಲಿಕೇಶನ್ ಮತ್ತು ಮಾಧ್ಯಮ ವಿಷಯಗಳನ್ನು ಪರೀಕ್ಷೆ ನಡೆಯಬೇಕಿತ್ತು.