ನವದೆಹಲಿ: ಈಶಾನ್ಯ ದೆಹಲಿಯ ಗೋಕಾಲ್ಪುರಿಯಲ್ಲಿ ಗುರುವಾರದಂದು 25 ವರ್ಷದ ಮಹಿಳೆ ಕೊಳೆತ ದೇಹವನ್ನು ತನ್ನ ಫ್ಲಾಟ್ ಅಲ್ಮೀರಾದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮದುವೆಯಾದ ವ್ಯಕ್ತಿಯೊಂದಿಗೆ ಅವಳು ಸಹ-ಜೀವನ ನಡೆಸುತಿದ್ದಳು ಎನ್ನುವ ಬಗ್ಗೆ ಸಂಶಯವಿದೆ ಎನ್ನಲಾಗಿದೆ. ಆ ಮಹಿಳೆಯು ಪತ್ನಿಯಿಂದ ವಿಚ್ಛೇದನ ಪಡೆಯಲು ಮತ್ತು ತನ್ನನ್ನು ಮದುವೆಯಾಗಲು ಒತ್ತಾಯಿಸಿದ್ದಳು ಎಂದು ಪೊಲೀಸ್ ರು ತಿಳಿಸಿದ್ದರು.


ಮೃತ ಮಹಿಳೆಯು ವ್ಯಕ್ತಿಯೊಂದಿಗಿನ ಸಹ-ಜೀವನವನ್ನು ಪೋಷಕರು ವಿರೋಧಿಸಿದ ಬಳಿಕ ಅವರಿಂದ ದೂರ ವಾಸಿಸುತ್ತಿದ್ದಳು.ಆ ವ್ಯಕ್ತಿಯ ಫ್ಲಾಟ್  ಕೂಡ ಅದೆ ಪ್ರದೇಶದಲ್ಲಿದೆ ಎಂದು ತಿಳಿದುಬಂದಿದೆ.


ಆಕೆಯ ಸಹ- ಜೀವನ ಪಾಲುದಾರ ತನ್ನ ಮನೆಯಿಂದ ಬರುತ್ತಿರುವ ವಾಸನೆಯ ಬಗ್ಗೆ ಪೋಲಿಸ್ ರಿಗೆ ಮಾಹಿತಿ ನೀಡಿದ್ದಾರೆ. ಈಗ ಪೊಲೀಸರು ಮನೆಯ ಅಲ್ಮೀರಾ ಒಳಗೆ ದೇಹವನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.


ಪೋಲೀಸರ ಪ್ರಕಾರ ಆಕೆಯ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು ಕೆಲವು ದಿನಗಳ ಹಿಂದಷ್ಟೇ ಅವಳು ಮೃತಪಟ್ಟಿದ್ದಾಳೆ ಎಂದು ಶಂಕಿಸಲಾಗಿದೆ. ಪೊಲೀಸರು ಈಗ ಸಹ ಜೀವನ ಪಾಲುದಾರ ಮತ್ತು ನೆರೆಹೊರೆಯವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.