ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಂಗಳವಾರ ದೆಹಲಿಯಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ್ತೊಮ್ಮೆ EVM ವಿಚಾರವಾಗಿ ಹೇಳಿದೆ ನೀಡಿದ್ದಾರೆ. ಆರಂಭಿಕ ಟ್ರೆಂಡ್ಸ್ ಗಳಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿ ಇದ್ದರೆ, ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಪಕ್ಷ ಇದುವರೆಗೆ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ. ಈ ಸಂದರ್ಭದಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ, 'EVM ಟ್ಯಾಂಪರ್ ಪ್ರೂಫ್ ಆಗಿಲ್ಲ ಮತ್ತು ಹಲವು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಇವುಗಳನ್ನು ಬಳಸಲಾಗುವುದಿಲ್ಲ' ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು, "ಚಿಪ್ ಹೊಂದಿರುವ ಯಾವುದೇ ಮಶೀನ್ ಟ್ಯಾಂಪರ್ ಪ್ರೂಫ್ ಆಗಿಲ್ಲ. ಅಭಿವೃದ್ಧಿ ಹೊಂದಿರುವ ದೇಶಗಳು EVM ಮಶೀನ್ ಗಳನ್ನು ಏಕೆ ಬಳಸುವುದಿಲ್ಲ ಎಂಬುದನ್ನು ದಯವಿಟ್ಟು ಒಮ್ಮೆ ಆಲೋಚಿಸಿ". ಇದೇ ವೇಳೆ ಚುನಾವಣಾ ಆಯೋಗ ಹಾಗೂ ಸರ್ವೋಚ್ಛ ನ್ಯಾಯಾಲಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.



ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗವನ್ನು ಪ್ರಶ್ನಿಸಿರುವ ದಿಗ್ವಿಜಯ್ ಸಿಂಗ್, "ಈಗಲಾದರೂ ಸರ್ವೋಚ್ಛ ನ್ಯಾಯಾಲಯ ಹಾಗೂ ಚುನಾವಣಾ ಆಯೋಗಗಳು EVM ವಿಚಾರಕ್ಕೆ ಸಂಬಂಧಿಸಿದಂತೆ ಯೋಚನೆ ಮಾಡಲಿವೆಯೇ? ಎಂದಿದ್ದಾರೆ. ನಾವು ಕೆಲ ಮೋಸಗಾರರನ್ನು ಚುನಾವಣಾ ಫಲಿತಾಂಶ ಹ್ಯಾಕ್ ಮಾಡಲು ಹಾಗೂ 1.3 ಬಿಲಿಯನ್ ಜನರ ಜನಾದೇಶವನ್ನು ಕದಿಯಲು ಅನುಮತಿಸಬಾರದು" ಎಂದಿದ್ದಾರೆ.


"EVM ಮತದಾನದ ಜೊತೆಗೆ ಬ್ಯಾಲೆಟ್ ಮತದಾನ ಕೂಡ ನಡೆಯಬೇಕು. ಒಂದು ವೇಳೆ ಈ ಎರಡೂ ಪರಿಣಾಮಗಳು ಮ್ಯಾಚ್ ಆದ ಸಂದರ್ಭದಲ್ಲಿ ಅಂತಹ ಫಲಿತಾಂಶ ಘೋಷಣೆಯಾಗಬೇಕು. ಒಂದು ವೇಳೆ ಈ ಎರಡು ವಿಧಾನಗಳ ಮತ ಎಣಿಕೆ ವಿಭಿನ್ನ ಫಲಿತಾಂಶಗಳನ್ನು ನೀಡಿದರೆ ಅವುಗಳ ಮತ ಎಣಿಕೆ ಕಾರ್ಯ ಸದನದಲ್ಲಿ ನಡೆಸಬೇಕು" ಎಂದು ಅವರು ಹೇಳಿದ್ದಾರೆ.