ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಇದುವರೆಗೆ ಬಂದ ಫಲಿತಾಂಶದ ಪ್ರಕಾರ, ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಆಮ್ ಆದ್ಮಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವನ್ನು ಹಾಡಿ ಹೋಗಲಿರುವ BJP ಪಕ್ಷದ ಹಿರಿಯ ಮುಖಂಡ ಚಂದ್ರ ಕುಮಾರ್ ಬೋಸ್ ಪರೋಕ್ಷವಾಗಿ ತಮ್ಮ ಪಕ್ಷವನ್ನೇ ಗುರಿಯಾಗಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ದೆಹಲಿಯ ಜನರು ಮತ್ತೊಮ್ಮೆ ಅಭಿವೃದ್ಧಿ ಹಾಗೂ ಆರೋಗ್ಯ ಸೇವೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪಶ್ಚಿಮ ಬಂಗಾಳದ BJP ಮುಖಂಡ ಯಾವ ಪಕ್ಷದ ಹೆಸರನ್ನು ಉಲ್ಲೇಖಿಸದೆ ಆಮ್ ಆದ್ಮಿ ಪಕ್ಷವನ್ನು ಹಾಡಿಹೊಗಳಿದ್ದು, ಪರೋಕ್ಷವಾಗಿ ತಮ್ಮ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಬೋಸ್, " ದೆಹಲಿ ಜನರು ಮೂಲಭೂತ ಸೌಕರ್ಯ, ಆರೋಗ್ಯ ಹಾಗೂ ನೇರ ಲಾಭಗಳಿಗೆ ತಮ್ಮ ಬೆಂಬಲ ಸೂಚಿಸಿರುವುದು ದೆಹಲಿ ಫಲಿತಾಂಶಗಳಿಂದ ನಿಚ್ಚಳವಾಗಿದೆ" ಎಂದಿದ್ದಾರೆ.


ವಿಪಕ್ಷದಲ್ಲಿದ್ದರೂ ಕೂಡ ಸರ್ಕಾರದ ಒಳ್ಳೆಯ ನೀತಿಗಳನ್ನು ನಾವು ಕೊಂಡಾಡಬೇಕು ಎಂದಿರುವ ಬೋಸ್. ಒಡೆದು ಆಳುವ ನೀತಿ ಹೊಂದಿರುವ ಪಕ್ಷಗಳು ಆತ್ಮ ವಿಮರ್ಶೆ ನಡೆಸುವ ಆಗತ್ಯವಿದ್ದು, ಭಾರತೀಯ ಜನರು ಇಂತಹ ಪಕ್ಷಗಳ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದಿದ್ದಾರೆ.


ದ್ವೇಷ ಹುಟ್ಟುಹಾಕುವ ರಾಜಕೀಯವನ್ನು ಸ್ಥಗಿತಗೊಳಿಸಬೇಕು, ಒಡೆದು ಆಳುವ ರಾಜಕೀಯಕ್ಕೆ ಅಂತ್ಯಹಾಡಬೇಕು, ಧ್ರುವೀಕರಣದ ರಾಜಕೀಯಕ್ಕೆ ಇತೀಶ್ರಿ ಹಾಡಬೇಕು ಎಂಬುದು ದೆಹಲಿ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದೂ ಕೂಡ ಬೋಸ್ ಹೇಳಿದ್ದಾರೆ.