ನವದೆಹಲಿ: ದೆಹಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ಸರ್ಕಾರವು ನಾಳೆ ಜಂತರ್ ಮಂತರ್ ನಲ್ಲಿ ರೈತರು ನಡೆಸುತ್ತಿರುವ ಕಿಸಾನ್ ಸಂಸದ್ ಗೆ ಅನುಮತಿ ನೀಡಿದೆ.ಆದರೆ ಈ ಸಂದರ್ಭದಲ್ಲಿ ಕೊರೊನಾ ಪ್ರೋಟೋಕಾಲ್ ಗಳನ್ನು ಅನುಸರಿಸುತ್ತಿರುವುದು ಕಡ್ಡಾಯವಾಗಿದೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆಗೆ ಪೊಲೀಸರು ಕೂಡ ರೈತರ ಪ್ರತಿಭಟನೆ (Farmers Protest) ನಡೆಸಲು ಅವಕಾಶ ನೀಡಿದ್ದಾರೆ.ಅಷ್ಟೇ ಅಲ್ಲದೆ ಈ ಹಿಂದೆ ಜನವರಿ 26 ರ ಹಾಗೆ ಘಟನೆಗಳು ನಡೆಯದಂತೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.ಪ್ರತಿಭಟನೆಗೆ ಅನುಕೂಲವಾಗುವಂತೆ, ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ (ಡಿಡಿಎಂಎ) ಅಡಿಯಲ್ಲಿ ಕೋವಿಡ್ ನಿರ್ಬಂಧಗಳನ್ನು ವಿಧಿಸುವ ಆದೇಶದಲ್ಲಿ ರಾಜ್ಯ ಸರ್ಕಾರ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. 


ಇದನ್ನೂ ಓದಿ : CBSE 10th exam 2021 Results : ಇಂದು ಪ್ರಕಟವಾಗಲ್ಲ CBSE 10ನೇ ತರಗತಿ ಪರೀಕ್ಷೆ ಫಲಿತಾಂಶ : ವಿವರಗಳಿಗೆ ಇಲ್ಲಿ ಪರಿಶೀಲಿಸಿ


2020 ರ ನವೆಂಬರ್‌ನಲ್ಲಿ ರೂಪುಗೊಂಡ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕಿಸಾನ್ ಸಂಸದ್‌ ನ್ನು ಆಯೋಜಿಸಿದೆ.ನಾಳೆ ಪ್ರತಿಭಟನಾ ನಿರತ ರೈತರು ನಾಲ್ಕು ಬಸ್‌ಗಳಲ್ಲಿ ಸಂಸತ್ ಭವನ ಸಂಕೀರ್ಣಕ್ಕೆ ಹೋಗಲಿದ್ದು, ಅದು ಸಿಂಘುನಲ್ಲಿರುವ ಎಸ್‌ಕೆಎಂ ಕಚೇರಿಯಿಂದ ಹೊರಡಲಿದೆ.ಸಂಸತ್ತಿನ ಮಾನ್ಸೂನ್ ಅಧಿವೇಶನ ಮುಗಿಯುವ ಆಗಸ್ಟ್ 13 ರವರೆಗೆ ಕಿಸಾನ್ ಸಂಸದ್ ನಡೆಯಲಿದೆ ಎಂದು ಎಸ್ಕೆಎಂ ಸದಸ್ಯ ಡಾ. ದರ್ಶನ್ ಪಾಲ್ ತಿಳಿಸಿದ್ದಾರೆ.


"ಎಲ್ಲವೂ ಸಂಸತ್ತಿನಂತೆಯೇ ಇರುತ್ತದೆ. ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಟೀ ಬ್ರೇಕ್ ಇತ್ಯಾದಿ ಇರುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ದೋಬಾ) ಸದಸ್ಯ ಮಂಜಿತ್ ಸಿಂಗ್ ರೈ ಹೇಳಿದರು.ಭಾಗವಹಿಸುವ ರೈತರಿಗೆ ಗುರುತಿನ ಪತ್ರಗಳನ್ನು ನೀಡಲಾಗುವುದು. ಪೊಲೀಸರು ಅವರನ್ನು ತಡೆದರೆ, ಅದಕ್ಕೆ ಅವರು ಯಾವುದೇ ಪ್ರತಿರೋಧ ಒಡ್ಡದೆ ಬಂಧನಕ್ಕೆ ಒಳಪಡಲಿದ್ದಾರೆ.


ಇದನ್ನೂ ಓದಿ : App ಇಲ್ಲದೆಯೇ Ola ಅಥವಾ Uber ಕ್ಯಾಬ್ ಬುಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ


"ನಾವು ಆರು ತಿಂಗಳವರೆಗೆ ಜೈಲುವಾಸ ಅನುಭವಿಸಲು ರೈತರನ್ನು ಕೇಳಿಕೊಂಡಿದ್ದೇವೆ. ಅದರ ಹೊರತಾಗಿಯೂ, ಮೆರವಣಿಗೆಗೆ ಹೋಗಲು ಅವರಲ್ಲಿ ಉತ್ಸಾಹವಿದೆ" ಎಂದು ಎಸ್ಕೆಎಂನ ರಾಮಿಂದರ್ ಪಟಿಯಾಲ ಹೇಳಿದರು.ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.ನಂತರ ಪ್ರತಿಭಟನಾಕಾರರು ಸಂಜೆ 5 ಗಂಟೆಗೆ ಜಂತರ್ ಮಂತರಿನಿಂದ ಹಿಂತಿರುಗಲಿದ್ದಾರೆ ಎನ್ನಲಾಗಿದೆ.


ಸಂಸತ್ತಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎರಡು ಬ್ಯಾಚ್ ರೈತರು ಕೇರಳದಿಂದ ದೆಹಲಿಗೆ ತೆರಳಿದ್ದಾರೆ. ಅದೇ ರೀತಿ ಕರ್ನಾಟಕ, ತಮಿಳುನಾಡು ಮತ್ತು ಇತರ ದೂರದ ರಾಜ್ಯಗಳಿಂದಲೂ ರೈತರ ತುಕಡಿಗಳು ತಲುಪುತ್ತಿವೆ ಎಂದು ಎಸ್‌ಕೆಎಂ ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ :ರೈತರ ಪ್ರತಿಭಟನೆಗೆ ಬೆಂಬಲಸಿ ರಾಜೀನಾಮೆ ಸಲ್ಲಿಸಿದ ಪಂಜಾಬ್ DIG!


ಸಿರ್ಸಾದಲ್ಲಿ, ಸರ್ದಾರ್ ಬಾಲ್ದೇವ್ ಸಿಂಗ್ ಸಿರ್ಸಾ ಅವರ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಇಂದು 4 ನೇ ದಿನವನ್ನು ಪ್ರವೇಶಿಸಿದೆ. ಪ್ರತಿಭಟನಾಕಾರರು ಮೊದಲೇ ಘೋಷಿಸಿದಂತೆ, ಇಂದು ಬೆಳಿಗ್ಗೆ ಎರಡು ಗಂಟೆಗಳ ಕಾಲ ಮೂರು ವಿಭಿನ್ನ ಸ್ಥಳಗಳಲ್ಲಿ ಹೆದ್ದಾರಿಯನ್ನು ತಡೆಹಿಡಿದ್ದರು.


ಕಿಸಾನ್ ಸಂಸಾದ್‌ಗೆ ಅನುಮತಿ ಪಡೆಯಲು ಒಕ್ಕೂಟಗಳು ಈ ಹಿಂದೆ ಸಿಂಗು ಗಡಿಯ ಸಮೀಪವಿರುವ ಮಂತ್ರಂ ರೆಸಾರ್ಟ್‌ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದವು. ಅಧಿಕಾರಿಗಳು ಮೊದಲಿಗೆ ಪ್ರತಿಭಟನೆಗೆ ಪರ್ಯಾಯ ಸ್ಥಳಗಳನ್ನು ಸೂಚಿಸಿದ್ದರು.ಏಳು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಜಾಗರೂಕತೆ ಇಟ್ಟುಕೊಳ್ಳಬೇಕು ಮತ್ತು ಅಗತ್ಯವಿದ್ದರೆ ಅವುಗಳನ್ನು ಮುಚ್ಚುವಂತೆ ಪೊಲೀಸರು ದೆಹಲಿ ಮೆಟ್ರೋ ರೈಲ್ವೆ ನಿಗಮಕ್ಕೆ ಪತ್ರ ಬರೆದಿದ್ದರು.


ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ನವೆಂಬರ್ 26 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ