ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಗರದ ರಾಮಲಿಲಾ ಮೈದಾನಕ್ಕೆ ಮರುನಾಮಕರಣ ಮಾಡಬೇಕೆಂದು ಉತ್ತರ ದೆಹಲಿ ಮುನಿಸಿಪಲ್ ಕಾರ್ಪೋರೇಶನ್ ಪ್ರಸ್ತಾಪಿಸಿದೆ.


COMMERCIAL BREAK
SCROLL TO CONTINUE READING

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದೇ ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ನಿಧನಕ್ಕೆ ದೇಶ-ವಿದೇಶಗಳ ನಾಯಕರು ಶೋಕ ಸಂದೇಶಗಳನ್ನು ಕಳುಹಿಸಿದ್ದಾರೆ. ಏತನ್ಮಧ್ಯೆ, ದೆಹಲಿಯ ರಾಮಲೀಲಾ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಮೈದಾನ ಎಂದು ಮರುನಾಮಕರಣ ಮಾಡಬೇಕೆಂದು ಉತ್ತರ ದೆಹಲಿ ಮುನಿಸಿಪಲ್ ಕಾರ್ಪೋರೇಶನ್ ಪ್ರಸ್ತಾಪಿಸಿದೆ. 


ರಾಮಲೀಲಾ ಮೈದಾನವು ವಾರ್ಷಿಕ ರಾಮ ಲೀಲಾ ಉತ್ಸವಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ವರ್ಷ ಪೂರ್ತಿ ಹಲವು ಪ್ರತಿಭಟನೆಗಳು, ಸಮಾವೇಶಗಳು, ಸಭೆಗಳು, ಉತ್ಸವಗಳು, ಹಲವಾರು ರಾಜಕೀಯ ರ್ಯಾಲಿಗಳು, ಉತ್ಸವಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ಈ ಮೈದಾನದಲ್ಲಿ ಪ್ರತೀ ಬಾರಿ ನಡೆಯುತ್ತಿದ್ದ ವಾಜಪೇಯಿ ಅವರ ಸಭೆಗಳಿಗೆ ಭಾರೀ ಸಂಖ್ಯೆಯ ಜನ ಸೇರುತ್ತಿದ್ದರು ಎನ್ನಲಾಗಿದೆ.