ನೋಟು ನಿಷೇಧಿಕರಣ ಉತ್ತಮ ಯೋಜನೆಯಲ್ಲ - ರಘುರಾಮ್ ರಾಜನ್
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಂತಹ ನೋಟು ನಿಷೆದೀಕರಣ ಯೋಜನೆ ಉತ್ತಮ ಯೋಜನೆಯಲ್ಲ ಎಂದು ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತಾಗಿ ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ಮಾತನಾಡಿದ ರಘುರಾಮ್ ರಾಜನ್ ಸರ್ಕಾರವು ನೋಟು ನಿಷೆಧಿಕರಣದ ಕುರಿತಾಗಿ ರಿಸರ್ವ್ ಬ್ಯಾಂಕ್ ಬಳಿ ಯಾವುದೇ ಸಲಹೆಯನ್ನು ಪಡೆದಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಆದರೆ ಈ ಕುರಿತಾಗಿ ರಿಸರ್ವ್ ಬ್ಯಾಂಕ್ ಬಳಿ ಪ್ರಸ್ತಾವನೆ ಬಂದಾಗ ನಾನು ಇದು ಅಷ್ಟು ಒಳ್ಳೆಯ ಯೋಜನೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನು ಎಂದು ಅವರು ತಿಳಿಸಿದರು.ಅಲ್ಲದೆ ನೋಟು ನಿಷೇಶದ ಯೋಜನೆಯನ್ನು ಯಾವುದೇ ರೀತಿಯ ಪೂರ್ವ ತಯಾರಿಯಿಲ್ಲದೆ ಜಾರಿಗೆ ತರಲಾಗಿತ್ತು ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ಕಪ್ಪು ಹಣಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರವು ನವಂಬರ್ 8 2016 ರಂದು 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ್ದರು.