ನವದೆಹಲಿ : ಹೊಸವರ್ಷ-2018ರ ಮೊದಲ ದಿನವಾದ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಗೂ ಉತ್ತರ ಭಾರತದ ಹಲವೆಡೆ ದಟ್ಟಮಂಜು ಕವಿದ ವಾತಾವರಣ ಮುಂದುವರಿದಿದ್ದು, ವಿಮಾನ ಹಾಗೂ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಿಂದ ಹೊರಡಬೇಕಿದ್ದ ಮತ್ತು ಬೇರೆ ನಿಲ್ದಾಣಗಳಿಂದ ದೆಹಲಿಗೆ ಆಗಮಿಸಬೇಕಿದ್ದ ಸುಮಾರು 350 ವಿಮಾನಗಳ ಸಂಚಾರ ವಿಳಂಬ ಅಥವಾ ಸ್ಥಗಿತವಾಗಲಿದೆ. 


COMMERCIAL BREAK
SCROLL TO CONTINUE READING

ದಟ್ಟ ಮಂಜು ಆವರಿಸಿರುವ ಕಾರಣ ರೈಲು ಸಂಚಾರವೂ ಅಸ್ತವ್ಯಸ್ಥವಾಗಿದ್ದು, 56 ರೈಲುಗಳು ವಿಳಂಬ, 20 ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು 15 ರೈಲುಗಳನ್ನು ರದ್ದುಮಾಡಲಾಗಿದೆ. 


ದೆಹಲಿಯಲ್ಲಿ ಉಷ್ಣಾಂಶ 7 ಡಿಗ್ರಿ ಸೆಲ್ಷಿಯಸ್ ಗೆ ಇಳಿದಿದ್ದು, ಬೆಳಗಿನ ಸಮಯದಲ್ಲಿ ಹೆಚ್ಚೆಂದರೆ 21 ಡಿಗ್ರಿ ಉಷ್ಣಾಂಶವಿದೆ. ಮುಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶಗಳು 23 ಡಿಗ್ರಿ ಮತ್ತು 5 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. 


ಅಲ್ಲದೆ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಯೂ ಹೆಚ್ಚಾಗಿದ್ದು, ಅನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇನ್ನೂ ವಾಯು ಮಾಲಿನ್ಯ ಮಟ್ಟವು ದೆಹಲಿಯ ಶಾದಿಪುರ್ನಲ್ಲಿ 332, ಸಿರಿ ಫೋರ್ಟ್ನಲ್ಲಿ 388, ಐಟಿಒ ನಲ್ಲಿ 182 ಮತ್ತು ದ್ವಾರಕ ದಲ್ಲಿ 257 ದಾಖಲಾಗಿದೆ. 


ಉತ್ತರ ಭಾರತದ ಇತರ ರಾಜ್ಯಗಳೂ ಸಹ ಶೀತ ಗಾಳಿ ಮತ್ತು ದಟ್ಟ ಮಂಜಿಗೆ ಒಳಗಾಗಿವೆ. 


ಉತ್ತರ ಪ್ರದೇಶದ ವಾರಣಾಸಿ, ಅಲಹಾಬಾದ್, ಕಾನ್ಪುರ್, ಜಾನ್ಸಿ ಮತ್ತು ಆಗ್ರಾದಲ್ಲಿ ಅತೀವ ಮಂಜು ಆವರಿಸಿದ್ದು ರೈಲು ಮತ್ತು ವಿಮಾನ ಸಂಚಾರ ಅಸ್ಥವ್ಯಸ್ಥಗೊಂಡಿದೆ.