Makara Sankranti 2023 Date: ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ವಿಧವಾಗಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ, ಪೊಂಗಲ್, ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2ನೇ ಟಿ20ಗೆ ವಿರಾಟ್ ಕೊಹ್ಲಿ ಲಭ್ಯ… ಇಂದೋರ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್’ಗಳ ಸುರಿಮಳೆ ಕನ್ಫರ್ಮ್


ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಬರುತ್ತದೆ. ಆದರೆ, ಈ ವರ್ಷದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಮಕರ ಸಂಕ್ರಾಂತಿ ಜನವರಿ 14ರಂದು ಎಂದು ಹೇಳಿದರೆ, ಇನ್ನೂ ಕೆಲವರು 15ರಂದು ಎನ್ನುತ್ತಾರೆ.


ಇಂತಹ ಸಂದರ್ಭದಲ್ಲಿ ಈ ವರ್ಷದ ಮಕರ ಸಂಕ್ರಾಂತಿಯ ನಿಖರವಾದ ದಿನಾಂಕ ಮತ್ತು ಶುಭ ಸಮಯದ ಬಗ್ಗೆ ವಿವರವಾಗಿ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.


ಮಕರ ಸಂಕ್ರಾಂತಿಯು ಹಿಂದೂ ಸುಗ್ಗಿಯ ಹಬ್ಬವಾಗಿದ್ದು, ಇದನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಮುಖ್ಯವಾಗಿ ಸಂಕ್ರಾಂತಿ ಎಂದರೆ ಸೂರ್ಯನ ಚಲನೆ, ಮಕರ ಸಂಕ್ರಾಂತಿ ಎಂದರೆ ವರ್ಷದಲ್ಲಿ ಬರುವ ಎಲ್ಲಾ 12 ಸಂಕ್ರಾಂತಿಗಳಲ್ಲಿ ಪ್ರಮುಖವಾಗಿದೆ.


ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಆದರೆ ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಜನವರಿ 14 ರಂದು ನಡೆಯುವ ಸಂಕ್ರಾಂತಿ ಹಬ್ಬವನ್ನು ಜನವರಿ 15 ರಂದು ಆಚರಿಸಲಾಗುತ್ತದೆ.


ದೃಕ್ ಪಂಚಾಂಗದ ಪ್ರಕಾರ, ಸಂಕ್ರಾಂತಿ ತಿಥಿಯು ಜನವರಿ 15 ರಂದು ಬೆಳಿಗ್ಗೆ 2:45 ರಿಂದ ಪ್ರಾರಂಭವಾಗುತ್ತದೆ. ಇನ್ನು ಮಕರ ಸಂಕ್ರಾಂತಿ ಪುಣ್ಯಕಾಲವು ಬೆಳಿಗ್ಗೆ 7:15 ರಿಂದ ರಾತ್ರಿ 8:07 ರವರೆಗೆ 10 ಗಂಟೆ 31 ನಿಮಿಷಗಳವರೆಗೆ ಇರುತ್ತದೆ. ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ 7:15 ಕ್ಕೆ ಪ್ರಾರಂಭವಾಗಿ, 1 ಗಂಟೆ 45 ನಿಮಿಷಗಳ ಕಾಲ ಅಂದರೆ 9.00 ಕ್ಕೆ ಮುಕ್ತಾಯಗೊಳ್ಳುತ್ತದೆ.


ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಪ್ರದೇಶದ ಆಧಾರದ ಮೇಲೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಭಾರತದ ಹಿಂದೂಗಳು ಮತ್ತು ಸಿಖ್ಖರು ಇದನ್ನು ಮಾಘಿ ಎಂದು ಕರೆಯುತ್ತಾರೆ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ ಮಧ್ಯ ಭಾರತದಲ್ಲಿ, ಇದನ್ನು ಸುಕಾರತ್ ಎಂದು ಕರೆಯಲಾಗುತ್ತದೆ, ಅಸ್ಸಾಮಿಗಳು ಇದನ್ನು ಮಾಗ್ ಬಿಹು ಎಂದು ಕರೆಯುತ್ತಾರೆ, ಪೂರ್ವ ಉತ್ತರ ಪ್ರದೇಶದಲ್ಲಿ ಇದನ್ನು ಖಿಚಡಿ ಎಂದು ಕರೆಯಲಾಗುತ್ತದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ ಮತ್ತು ತಮಿಳುನಾಡಿನಲ್ಲಿ ಇದನ್ನು ತೈ ಪೊಂಗಲ್ ಅಥವಾ ಪೊಂಗಲ್ ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ: ಹುಣಸೆ ಇದ್ದರೆ ಸಾಕು… ಕೇವಲ 10 ನಿಮಿಷದಲ್ಲಿ ಬಿಳಿಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು!


ಮಕರ ಜ್ಯೋತಿ ದರ್ಶನ ಯಾವಾಗ?


ಶಬರಿಮಲೆ ದೇವಸ್ಥಾನದ ಮೂಲಗಳ ಪ್ರಕಾರ ಜನವರಿ 15ರಂದು ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ