Heavy Rain in Uttarakhand: ಅಕ್ಟೋಬರ್ ತಿಂಗಳು ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಮಾನ್ಸೂನ್ ಮುಗಿದು ತಿಂಗಳುಗಳು ಕಳೆದಿವೆ. ಆದರೆ ಅಕಾಲಿಕ ಮಳೆಯಿಂದಾಗಿ, ದೇಶದ ಹಲವು ರಾಜ್ಯಗಳು ನಾನಾ ರೀತಿಯ ತೊಂದರೆಯನ್ನು ಎದುರಿಸುತ್ತಿವೆ. ಅದರಲ್ಲೂ ಉತ್ತರಾಖಂಡ ಮತ್ತು ಕೇರಳದ ಸ್ಥಿತಿ ಕೆಟ್ಟದಾಗಿದೆ. ಕಳೆದ ಮೂರು ದಿನಗಳಿಂದ ಮಳೆಯಿಂದಾಗಿ ಉತ್ತರಾಖಂಡದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭೂ ಕುಸಿತದ ಘಟನೆಗಳು ಸಂಭವಿಸಿವೆ. ಪ್ರವಾಹ ಮತ್ತು ಮಳೆಯಿಂದ ಇಲ್ಲಿಯವರೆಗೆ 40 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ, ನೈನಿತಾಲ್ ನಲ್ಲಿ ಗರಿಷ್ಠ 25 ಸಾವುಗಳು ಸಂಭವಿಸಿವೆ.


COMMERCIAL BREAK
SCROLL TO CONTINUE READING

ಭಾರೀ ಮಳೆಯಿಂದಾಗಿ (Heavy Rain) ರಸ್ತೆಗಳು ಜಲಾವೃತಗೊಂಡಿವೆ. ನದಿಯ ಹರಿವಿನಿಂದಾಗಿ ಅನೇಕ ಪ್ರದೇಶಗಳಲ್ಲಿ ಸೇತುವೆಗಳು ಮುರಿದುಹೋಗಿವೆ. ಇದರಿಂದಾಗಿ ಸ್ಥಳೀಯ ಜನರು ಮತ್ತು ಪ್ರವಾಸಿಗರು ಪರದಾಡುತ್ತಿದ್ದಾರೆ. ಜನರನ್ನು ಸ್ಥಳಾಂತರಿಸಲು ವಾಯುಪಡೆ ನಿಯೋಜಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- Goa: ಗೋವಾ ಶ್ರೀಮಂತ ಪ್ರವಾಸಿಗರನ್ನು ಬಯಸುತ್ತದೆ, ಬಸ್‌ಗಳಲ್ಲಿ ಅಡುಗೆ ಮಾಡುವವರನ್ನಲ್ಲ- ಪ್ರವಾಸೋದ್ಯಮ ಸಚಿವ


ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (CM Pushkar Singh Dhami) ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದಾರೆ. ಉಧಮ್ ಸಿಂಗ್ ನಗರದಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ 40 ಜನರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಸಂಬಂಧಿಕರಿಗೆ 4 ಲಕ್ಷ ರೂ. ಹಾಗೂ ಈ ನೈಸರ್ಗಿಕ ವಿಕೋಪದಿಂದಾಗಿ ಮನೆ ಕಳೆದುಕೊಂಡವರಿಗೆ 1 ಲಕ್ಷ 9 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಲಾಗುವುದು. ಪ್ರಾಣಿ ನಷ್ಟ ಅನುಭವಿಸಿದವರಿಗೂ ಸಹಾಯ ಮಾಡಲಾಗುವುದು ಎಂದು ಘೋಷಿಸಿದರು.


ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: 17ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ


ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬಾಜ್‌ಪುರ, ರಾಮನಗರ, ಕಿಚ್ಚ ಮತ್ತು ಸಿತಾರ್‌ಗಂಜ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಪ್ರವಾಹದ ಅವಲೋಕನ ನಡೆಸಿದರು. ಈ ಸಮಯದಲ್ಲಿ, ರಾಜ್ಯ ಸಚಿವ ಧನ್ ಸಿಂಗ್ ರಾವತ್ ಮತ್ತು ರಾಜ್ಯ ಡಿಜಿಪಿ ಅಶೋಕ್ ಕುಮಾರ್ ಕೂಡ ಅವರೊಂದಿಗೆ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ