ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ" ಕೇವಲ 7 ಸ್ಥಾನಗಳಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ ಆದರೆ ಪ್ರಧಾನಿ ಮಂತ್ರಿ ಅಥವಾ ಅವರ ಸಲಹೆಗಾರರಾಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.



COMMERCIAL BREAK
SCROLL TO CONTINUE READING

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಡಿಯೂರಪ್ಪ "ಕೇವಲ 7 ಸ್ಥಾನಗಳಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ ಆದರೆ ಪ್ರಧಾನಿ ಮಂತ್ರಿ ಅಥವಾ ಅವರ ಸಲಹೆಗಾರರಾಗಲು ಹೊರಟಿದ್ದಾರಾ? ಎಂದು ಕುಟುಕಿದರು. ದೇವೇಗೌಡ ಇತ್ತೀಚಿಗೆ ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದರೆ ತಾವು ಅವರ ಬಳಿ ಕುಳಿತುಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.ಈ ಹೇಳಿಕೆಗೆ ಉತ್ತರಿಸುತ್ತಾ ಯಡಿಯೂರಪ್ಪ ಮಾಜಿ ಪ್ರಧಾನಿಯನ್ನು ವ್ಯಂಗ್ಯವಾಡಿದ್ದಾರೆ. 


ದೇವೇಗೌಡ ಅವರು ಎಲ್.ಕೆ.ಅಡ್ವಾಣಿ ಅವರ ಹಾಗೆ ನಿವೃತ್ತಿ ಆಗುವುದಿಲ್ಲ ಬದಲಾಗಿ ಜನರ ಕಲ್ಯಾಣಕ್ಕಾಗಿ ಸಕ್ರೀಯ ರಾಜಕೀಯದಲ್ಲಿರುವುದಾಗಿ ಹೇಳಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದ ಬಗ್ಗೆ ಮಾತನಾಡಿದ ದೇವೇಗೌಡ ಅವರು,"ನಾನು ಮೂರು ವರ್ಷಗಳ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನು ಘೋಷಿಸಿದ್ದೆ, ಆದರೆ ಈಗ ಬದಲಾದ ಪರಿಸ್ಥಿತಿಗಳು ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೆ ಮಾಡಿವೆ. ಇದರಲ್ಲಿ ಬಚ್ಚಿಡುವಂತದ್ದು ಏನು ಇಲ್ಲ. ನನಗೆ ಯಾವುದೇ ರೀತಿಯ ಮಹತ್ವಾಕಾಂಕ್ಷೆ ಇಲ್ಲ, ಆದರೆ ನಾನು ಹೇಳುವುದಿಷ್ಟೇ ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ "ಎಂದು ದೇವಗೌಡ ಹೇಳಿದ್ದರು.