ಭೀಮ-ಕೊರೆಗಾಂವ್ ಹಿಂಸಾಚಾರ ನಿಯಂತ್ರಣದಲ್ಲಿ ಫಡ್ನವಿಸ್ ವಿಫಲ-ಅಶೋಕ್ ಚವಾಣ್
ಮುಂಬೈ: ಇತ್ತೀಚಿಗೆ ನಡೆದ ಭೀಮ-ಕೊರೆಗಾಂವ್ ಹಿಂಸಾಚಾರದ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನೇವಿಸ್ ವಿಫಲರಾಗಿದ್ದಾರೆ ಆ ನಿಟ್ಟಿನಲ್ಲಿ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೇಸ್ ನಾಯಕ ಅಶೋಕ ಚವಾಣ್ ಆಗ್ರಹಿಸಿದ್ದಾರೆ.
ಸರ್ಕಾರವು ಹೇಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಯಿತು ಎನ್ನುವುದರ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿಸಲಾಗಿದೆ.ಆ ಮೂಲಕ ಪಕ್ಷವು ಕಂಡುಕೊಂಡಿರುವ ಅಂಶವೇನೆಂದರೆ ರಾಜ್ಯದ ಜಾತಿ ಉದ್ವಿಗ್ನತೆಗೆ ಸರ್ಕಾರವು ಪರೋಕ್ಷವಾಗಿ ಹಿಂಸೆಗೆ ಸಮ್ಮತಿಯನ್ನು ನೀಡಿದೆ.ಆದ್ದರಿಂದಲೇ ಈ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ದ ಕ್ರಮ ಬಿಜೆಪಿ ಸರ್ಕಾರವು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಮಹಾರಾಷ್ಟ್ರದಲ್ಲಿ ಸರ್ಕಾರದ ಆಡಳಿತ ಯಂತ್ರವು ಎಲ್ಲ ರೀತಿಯಿಂದಲೂ ಕುಸಿದಿದ್ದು ಆದ್ದರಿಂದ ತಕ್ಷಣ ದೇವೇಂದ್ರ ಫಡ್ನವಿಸ್ ರಾಜೆನಾಮೆ ನೀಡಬೇಕೆಂದು ಚವಾಣ್ ಒತ್ತಾಯಿಸಿದರು.