ನವದೆಹಲಿ: ಇಂದು ಮಧ್ಯಾಹ್ನ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ದೇವೇಂದ್ರ ಫಡ್ನವೀಸ್ ಭಾಗವಹಿಸಿ ನಮನ ಸಲ್ಲಿಸಿದರು. ಈಗ ಅವರ ಉಪಸ್ಥಿತಿ ಶಿವಸೇನಾ ಬಿಜೆಪಿ ಮೈತ್ರಿಕೂಟದಿಂದ ದೂರಾದ ನಂತರ ಬಂದಿದೆ.



COMMERCIAL BREAK
SCROLL TO CONTINUE READING

ಕಳೆದ ತಿಂಗಳು ನಡೆದ ಚುನಾವಣೆಯ ನಂತರ ಉಭಯ ಪಕ್ಷಗಳ ನಡುವಿನ ಸಂಬಂಧದ ವಿಘಟನೆಯ ಮಧ್ಯೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರು ಹೊರಟು ಹೋದ ನಂತರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬೈನ ಶಿವಾಜಿ ಪಾರ್ಕ್ ನಲ್ಲಿರುವ ಬಾಳ್ ಠಾಕ್ರೆ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಇದೇ ವೇಳೆ ಅಲ್ಲಿ ನೆರೆದಿದ್ದ ಶಿವಸೇನಾ ಕಾರ್ಯುಕರ್ತರು ಸರ್ಕಾರ್ ಕುನಾಚಿ ಶಿವಸೇನಾ ಚಿ (ಶಿವ ಸೇನಾದ್ದೇ ಸರ್ಕಾರ) ಎಂದು ಮರಾಠಿಯಲ್ಲಿ ಘೋಷಣೆ ಕೂಗಿದರು.



ಇದಾದ ನಂತರ ದೇವೇಂದ್ರ ಫಡ್ನವೀಸ್ ಅವರು ಮರಾಠಿಯಲ್ಲಿ ಟ್ವೀಟ್ ಮಾಡಿ ' ನಮ್ಮ ಸ್ಪೂರ್ತಿದಾಯಕ ಬಾಳಾಸಾಹೇಬ್ ಠಾಕ್ರೆ ಅವರ ಸ್ಮರಣಾರ್ಥ ದಿನದಂದು ಅವರಿಗೆ ನಮಿಸುತ್ತೇನೆ' ಎಂದು ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಸೇರಿದಂತೆ ಇತರ ಪಕ್ಷಗಳ ನಾಯಕರಂತೆ ಬಿಜೆಪಿ ನಾಯಕರಾದ ವಿನೋದ್ ತಾವ್ಡೆ ಮತ್ತು ಪಂಕಜಾ ಮುಂಡೆ ಉಪಸ್ಥಿತರಿದ್ದರು.