Devprayag Cloudburst Video: ದೇವಪ್ರಯಾಗದಲ್ಲಿ ಭಾರಿ ಮೋಡ ಸ್ಫೋಟ, ನೀರಿನ ಪ್ರವಾಹಕ್ಕೆ ಕೊಚ್ಚಿಹೋದ ಹಲವಾರು ಕಟ್ಟಡಗಳು
Devprayag Cloudburst: ಘಟನೆಯ ಕುರಿತು ಮಾಹಿತಿ ನೀಡಿರುವ ಟಿಹರಿ SHO, ಇದುವರೆಗೆ ಸುಮಾರು 12 ರಿಂದ 13 ಕಟ್ಟಡಗಳು ನೆಲಸಮಗೊಂಡಿವೆ ಏನು ಹೇಳಿದ್ದಾರೆ. ಈ ಕುರಿತು ಜನರಿಗೆ ಅಲರ್ಟ್ ಜಾರಿಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: Devprayag Cloudburst - ಮಂಗಳವಾರ Uttarakhand ರಾಜ್ಯದ ದೇವ್‌ಪ್ರಯಾಗ್‌ನಲ್ಲಿ ಮೋಡ ಸ್ಫೋಟಗೊಂಡ ಕಾರಣ ಬಂದ ನೀರಿನ ರಭಸಕ್ಕೆ ಪ್ರದೇಶದ ಅನೇಕ ಕಟ್ಟಡಗಳು ನೆಲಸಮಗೊಂಡಿವೆ. ಪುರಸಭೆಯ ವಿವಿಧೋದ್ದೇಶ ಕಟ್ಟಡ ಮತ್ತು ಐಟಿಐ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧರೆಗುರುಳಿವೆ. ನೀರಿನೊಂದಿಗೆ ಬಂದ ಅವಶೇಷಗಳ ಅಡಿ 8 ಅಂಗಡಿಗಳು ಸಂಪೂರ್ಣ ಹುದುಗಿಹೊಗಿವೆ. ಆದರೆ, ಕೊವಿಡ್ (Covid-19) ಕರ್ಫ್ಯೂ ಕಾರಣ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ನೀರಿನೊಂದಿಗೆ ಹರಿದು ಬಂದ ಅವಶೇಷಗಳ ಕಾರಣ ಭಾಗಿರಥಿ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಟಿಹರಿ (Tehri) SHO, ಇದುವರೆಗೆ 12-13 ಅಂಗಡಿಗಳು ನೆಲಕ್ಕುರುಳಿವೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ಅಲರ್ಟ್ ಘೋಷಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
BCCI ಎಚ್ಚರಿಕೆ : ಕೊರೋನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಸರಣಿಯಿಂದಲೇ ಔಟ್..!
ಮಂಗಳವಾರ ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ದಶರಥ ಪರ್ವತದ ಮೇಲೆ ಮೋಡ ಸ್ಫೋಟಗೊಂಡ ಕಾರಣ, ಅಲ್ಲಿಂದ ಹುಟ್ಟಿಕೊಳ್ಳುವ ಶಾಂತ ನದಿಯಲ್ಲಿ ಪ್ರವಾಹ ಉಂಟಾಗಿದೆ. ಶಾಂತಾ ನದಿ ಬಸ್ ನೆಲೆಯಿಂದ ಶಾಂತಿ ಬಜಾರ್ ಮೂಲಕ ಸಾಗಿ ಭಾಗೀರಥಿ ನದಿಯನ್ನು ಸೇರುತ್ತದೆ. ಪ್ರವಾಹದೊಂದಿಗೆ (Heavy Flood) ಬಂದ ಭಾರಿ ಬೌಲ್ದರ್ ನಿಂದ ಶಾಂತಿ ಬಜಾರ್‌ನಲ್ಲಿ ಅಪಾರ ಹಾನಿ ಸಂಭವಿಸಿದೆ. ಐಟಿಐನ ಮೂರು ಅಂತಸ್ತಿನ ಕಟ್ಟಡವು ಸಂಪೂರ್ಣ ನೆಲಕಚ್ಚಿದೆ. ಕಟ್ಟಡದ ಸೆಕ್ಯುರಿಟಿ ಗಾರ್ಡ್ ದಿವಾನ್ ಸಿಂಗ್ ಜಿಗಿದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ. ಐಟಿಐ ಭವನದಲ್ಲಿದ್ದ ಕಂಪ್ಯೂಟರ್ ಕೇಂದ್ರ, ಖಾಸಗಿ ಬ್ಯಾಂಕುಗಳು, ವಿದ್ಯುತ್, ಫೋಟೋ ಅಂಗಡಿಗಳು ಕೂಡ ಧರೆಗುರುಳಿವೆ. ಮತ್ತೊಂದೆಡೆ, ಶಾಂತಾ ನದಿಗೆ ಹೊಂದಿಕೊಂಡಂತೆ ಇರುವ ಸೇತುವೆ, ರಸ್ತೆ ಸೇರಿದಂತೆ ಆಭರಣ, ಬಟ್ಟೆ, ಸಿಹಿತಿಂಡಿಗಳ ಅಂಗಡಿಗಳು ಇತ್ಯಾದಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಶಾಂತಿ ಬಜಾರ್‌ನಲ್ಲಿ ಕೋಟ್ಯಾಂತರ ರೂಪಾಯಿಗಳ ಹಾನಿ ಸಂಭವಿಸಿದೆ ಎಂದು ಆರಂಭಿಕ ಅಂದಾಜು ವ್ಯಕ್ತಪಡಿಸಲಾಗುತ್ತಿದೆ. ಇದುವರೆಗೆ ಪೊಲೀಸರು ಯಾವುದೇ ಸಾವು-ನೋವುಗಳ ಕುರಿತು ವರದಿ ಮಾಡಿಲ್ಲ. ಕರೋನಾ ಕರ್ಫ್ಯೂ ಜಾರಿಯಲ್ಲಿರದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ವರ್ತಿಸಲಾಗುತ್ತಿದೆ.
ಇದನ್ನೂ ಓದಿ-ಗೋವಾ ಆಸ್ಪತ್ರೆಯಲ್ಲಿ 26 ಕೊರೊನಾ ರೋಗಿಗಳ ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.