DGCA Has Sent Notice to Air India: ವೀಲ್ ಚೇರ್ ಗಳ ಕೊರತೆಯಿಂದ 80 ವರ್ಷದ ಪ್ರಯಾಣಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ (ಡಿಜಿಸಿಎ) ಟಾಟಾ ಗ್ರೂಪ್ ಏರ್‌ಲೈನ್ಸ್ ಏರ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವೀಲ್ ಚೇರ್ ಲಭ್ಯವಾಗದ ಕಾರಣ 80 ವರ್ಷದ ಪ್ರಯಾಣಿಕರೊಬ್ಬರು ವಿಮಾನದಿಂದ ಟರ್ಮಿನಲ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಫೆಬ್ರವರಿ 12 ರಂದು, 80 ವರ್ಷದ ಬಾಬು ಪಟೇಲ್ ಅವರು ತಮ್ಮ ಪತ್ನಿ ನರ್ಮದಾ ಪಟೇಲ್ ಅವರೊಂದಿಗೆ ನ್ಯೂಯಾರ್ಕ್‌ನಿಂದ AI 116 ವಿಮಾನದಲ್ಲಿ (ಏರ್ ಇಂಡಿಯಾ) ಮುಂಬೈಗೆ ಬಂದರು. ಇಬ್ಬರೂ ಪ್ರಯಾಣಿಕರಿಗೆ ವೀಲ್ ಚೇರ್ ಅಗತ್ಯವಿರುವಂತೆ ಕಾಯ್ದಿರಿಸಲಾಗಿದೆ. ಆದರೆ, ವೀಲ್ ಚೇರ್ ಬೇಡಿಕೆ ಹೆಚ್ಚಾಗಿದ್ದರಿಂದ ಪ್ರಯಾಣಿಕರು ಕಾಯುವಂತೆ ಸೂಚಿಸಲಾಯಿತು. ವೀಲ್ ಚೇರ್ ಗಾಗಿ ಕಾಯುತ್ತಿದ್ದಾಗ ಒಂದೇ ಒಂದು ವೀಲ್ ಚೇರ್ ಸಿಕ್ಕಿದೆ. ಪತ್ನಿಯನ್ನು ಅದರಲ್ಲಿ ಕೂರಿಸಿಕೊಂಡು ಸಹಾಯಕನೊಂದಿಗೆ ಪತಿ ನಡೆಯತೊಡಗಿದ್ದಾರೆ. ಆದರೆ ಸುಮಾರು ಒಂದೂವರೆ ಕಿಲೋಮೀಟರ್ ನಡೆದ ಕಾರಣ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ನಾನಾವತಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.


ಇದನ್ನೂ ಓದಿ: ನಿತ್ಯ 500 ಕೋಟಿ ರೂ. ನಷ್ಟ, 70 ಲಕ್ಷ ಕಾರ್ಮಿಕರ ಸಂಕಷ್ಟ! ರೈತ ಚಳವಳಿಯ ಪರಿಣಾಮವೇನು? 


ಎಕ್ಸಿಕ್ಯೂಟಿವ್ ಚೇರ್ ವಿಚಾರಕ್ಕೆ ಸಂಬಂಧಿಸಿದಂತೆ ಏಳು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಏರ್ ಇಂಡಿಯಾಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ವೀಲ್‌ಚೇರ್‌ಗಳ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ವೀಲ್‌ಚೇರ್‌ಗಳು ಸಿಗುವಂತೆ ಗಮನವಹಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೂ ಸೂಚಿಸಿದೆ. ವಯೋವೃದ್ಧರು, ಅಂಗವಿಕಲರಿಗೆ ನೆರವಾಗಲು ವೀಲ್‌ಚೇರ್‌ಗಳನ್ನು ಒದಗಿಸಬೇಕು ಎಂಬ ನಿಯಮವಿದೆ ಎಂದು ಪ್ರಾಧಿಕಾರ ಒತ್ತಿ ಹೇಳಿದೆ.


ಘಟನೆಯ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ, ಅಂದು ವೀಲ್ ಚೇರ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಅಗತ್ಯವಿದ್ದ ಪ್ರಯಾಣಿಕರು ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದೆವು. ಒಂದು ವೀಲ್ ಚೇರ್ ಲಭ್ಯವಾದಾಗ 80 ವರ್ಷದ ಬಾಬು ಪಟೇಲ್ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಆಗ ಈ ಘಟನೆ ನಡೆದಿದೆ ಎಂದು ಹೇಳಿದೆ ಎನ್ನಲಾಗಿದೆ. 


ಇದನ್ನೂ ಓದಿ: ತಂತ್ರಜ್ಞಾನ ಉದ್ಯಮವು ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ : ನಾಸ್ಕಾಂ ಅಂದಾಜು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.