ನವದೆಹಲಿ: 2010 ರಲ್ಲಿ ದೌಲಾ ಕುವಾನ್ ದಲ್ಲಿ ನಡೆದ 30 ವರ್ಷದ ಮಿಜೊರಾಮ್ ನ ಮಹಿಳಾ ಬಿಪಿಓ ಉದ್ಯೋಗಿಯ ಅತ್ಯಾಚಾರ  ಪ್ರಕರಣದಲ್ಲಿ ಐದು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈಗ ಈ ತೀರ್ಪನ್ನು ಆರೋಪಿಗಳ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಪಿ.ಎಸ್.ತೆಜಿ ಅವರ ಪೀಠವು ಐದು ಆರೋಪಿಗಳ ಮೇಲ್ಮನವಿಯನ್ನು ವಜಾಗೊಳಿಸಿದೆ. ಹರಿಯಾಣದ ಮೆವತ್ ಪ್ರದೇಶದ ನಿವಾಸಿಗಳಾಗಿರುವ  ಉಸ್ಮಾನ್ ಅಲಿಯಾಸ್ ಕಾಲೆ, ಶಮ್ಶಾದ್ ಅಲಿಯಾಸ್ ಖುಟ್ಕಾನ್, ಶಾಹಿದ್ ಅಲಿಯಾಸ್ ಛೋಟಾ ಬಿಲ್ಲಿ, ಇಕ್ಬಾಲ್ ಅಲಿಯಾಸ್ ಬಡಾ ಬಿಲ್ಲಿ ಮತ್ತು ಕಮರುದ್ದೀನ್ ಅಲಿಯಾಸ್ ಮೊಬೈಲ್ ಎನ್ನುವ ಯುವಕರಿಗೆ ಶಿಕ್ಷೆಯನ್ನು ವಿಧಿಸಿದೆ.


ಈ ಆರೋಪಿಗಳಿಗೆ ಯಾವುದೇ ರೀತಿಯಿಂದಲೂ ಕೂಡಾ ವಾದದ ವೇಳೆ ಸೂಕ್ತ ಸಾಕ್ಷಿ ನೀಡಲು ವಿಫಲವಾಗಿದ್ದರಿಂದ ಅವರ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಆ ಮಹಿಳೆಯ ವಾದದಂತೆ , 2010 ರ ನವೆಂಬರ್ 23 ರಿಂದ 24 ರ ರಾತ್ರಿ,   ದಕ್ಷಿಣದ ದೆಹಲಿಯ ಮೋತಿ ಬಾಗ್ ಹತ್ತಿರ ವಿರುವ ಶರ್ಮಾ ಅಟೋಮೊಬೈಲ್ಸ್ ಹತ್ತಿರ ಆ ಮಹಿಳೆಯನ್ನು ಅಪಹರಿಸಿ ಚಲಿಸುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರಗೈಯಲಾಗಿತ್ತು ಎಂದು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ವಿವರಿಸಲಾಗಿದೆ.


 


with PTI inputs