ಚೆನ್ನೈ: ಮಾಜಿ ಎಐಎಡಿಎಂಕೆ ನಾಯಕ ಮತ್ತು ಸ್ವತಂತ್ರ ಅಭ್ಯರ್ಥಿ ಟಿಟಿವಿ ಧನಕರನ್ ನಾಲ್ಕನೇ ಸುತ್ತಿನ ಎಣಿಕೆಯ ಬಳಿಕ ರಾಧಕೃಷ್ಣನ್ ನಗರ (ಆರ್.ಕೆ.ನಗರ) ಕ್ಷೇತ್ರಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಸುಮಾರು 10,000 ಮತಗಳ  ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದರಿಂದ ಎಐಎಡಿಎಂಕೆ ಮತ್ತು ಧನಕರನ್ ಬೆಂಬಲಿಗರು ನಡುವೆ ಘರ್ಷಣೆಗೆ ಉಂಟಾಗಿ ಎರಡು ಬಾರಿ ಮತ ಎಣಿಕೆ ಸ್ಥಗಿತಗೊಂಡಿತು.  


COMMERCIAL BREAK
SCROLL TO CONTINUE READING

ಎಐಎಡಿಎಂಕೆ ಕಾರ್ಯಕರ್ತರು ಮತಗಳಿಕೆಯಲ್ಲಿ ಹಿನ್ನಡೆ ಸಾಧಿಸುತ್ತಿದ್ದಂತೆ  ಚುನಾವಣಾ ಅಧಿಕಾರಿಗಳ ಮೇಲೆ ದಾಳಿ ಮಾಡಿ ಆಸ್ತಿಯನ್ನು ನಾಶಪಡಿಸಿದರು. ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಿದ  ನಂತರ ಎಣಿಕೆಯು ಮತ ಎಣಿಕೆ ಪ್ರಾರಂಭವಾಯಿತು. ಎಐಎಡಿಎಂಕೆನ ಇ.ಮಧುಸುಧಾನನ್, ಡಿಎಂಕೆನ ಎನ್ ಮಾರುದು ಗಣೇಶ್ ಮತ್ತು ಭಾರತೀಯ ಜನತಾ ಪಾರ್ಟಿ ಕೆ ನಾಗರಾಜನ್ ಅವರು ಉಪಚುನಾವಣೆಯಲ್ಲಿನ ಇತರ ಸ್ಪರ್ಧಿಗಳಾಗಿದ್ದಾರೆ.


ಡಿಸೆಂಬರ್ 21 ರಂದು ರಾಧಕೃಷ್ಣನ್ ನಗರ (ಆರ್.ಕೆ.ನಗರ್) ವಿಧಾನಸಭಾ ಉಪಚುನಾವಣೆಯಲ್ಲಿ 73 ಪ್ರತಿಶತದಷ್ಟು ಮತದಾನವನ್ನು ದಾಖಲಿಸಲಾಗಿತ್ತು. ಆರ್.ಕೆ.ನಗರ್ ವಿಧಾನ ಸಭಾ ಕ್ಷೇತ್ರವು  ಡಿಸೆಂಬರ್ 2016 ರಲ್ಲಿ ಎಐಎಡಿಎಂಕೆಯ  ಜೆ ಜಯಲಲಿತಾ ಅವರ ಮರಣದ ನಂತರ ಖಾಲಿಯಾಗಿತ್ತು, ಜಯಲಲಿತಾ ಮರಣದ ನಂತರ ನಡೆದ ಮೊದಲ ಉಪಚುನಾವಣೆ ಇದಾಗಿದೆ ಆದ್ದರಿಂದ  ಈಗ  ಆಡಳಿತ ಪಕ್ಷ ಎಐಎಡಿಎಂಕೆಗೆ ಈ ಕ್ಷೇತ್ರದ ಫಲಿತಾಂಶ ಸವಾಲಾಗಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.