ಕೊಹಿಮಾ: ನಾಗಾಲ್ಯಾಂಡ್‌ನ ರೈತನೊಬ್ಬನಿಗೆ ಆಕಸ್ಮಿಕವಾಗಿ 'ವಜ್ರ'ಕ್ಕೆ ಹೋಲುವ ಹೊಳೆಯುವ ಕಲ್ಲು ಪತ್ತೆಯಾದ ಕೆಲ ದಿನಗಳ ನಂತರ ರಾಜ್ಯ ಸರ್ಕಾರ ಭೂವಿಜ್ಞಾನಿಗಳನ್ನು ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಅಮೂಲ್ಯವಾದ ರತ್ನದ ಕಲ್ಲು ಹುಡುಕಲು ಗ್ರಾಮಸ್ಥರಲ್ಲಿ ಕುತೂಹಲ ಹೆಚ್ಚಾಗಿದೆ ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ 'ವಜ್ರಗಳು' (Diamond) ದೊರೆತಿವೆ ಎಂದು ವದಂತಿ ಹರಡಿವೆ.


ನಾಗಾಲ್ಯಾಂಡ್‌ನ (Nagaland) ಭೂವಿಜ್ಞಾನ ಮತ್ತು ಗಣಿಗಾರಿಕೆಯ ನಿರ್ದೇಶಕ ಎಸ್ ಮಾನೆನ್ ಅವರು ಗುರುವಾರ ಹೊರಡಿಸಿದ ಆದೇಶದಲ್ಲಿ ಭೂವಿಜ್ಞಾನಿಗಳಾದ ಅಬೆಂಥುಂಗ್ ಲೋಥಾ, ಲಾಂಗ್ರಿಕಾಬಾ, ಕೆನ್ಯೆಲೊ ರೆಂಗ್ಮಾ ಮತ್ತು ಡೇವಿಡ್ ಲುಪೆನಿ - ಈ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.


ದೇಶದ ಈ ಭಾಗದಲ್ಲಿ ಡಿಸೆಂಬರ್ 31ರವರೆಗೆ ಲಾಕ್‌ಡೌನ್


ಪಿಟಿಐ ವರದಿಯ ಪ್ರಕಾರ ಜಿಲ್ಲೆಯ ವಾಂಚಿಂಗ್ ಪ್ರದೇಶದಲ್ಲಿ ಅಮೂಲ್ಯ ಖನಿಜಗಳು ದೊರೆತಿವೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಹಕ್ಕುಗಳನ್ನು ಪರಿಶೀಲಿಸುವಂತೆ ತಂಡವನ್ನು ಕೋರಲಾಗಿದೆ. ಈ ತಂಡವು ನವೆಂಬರ್ 30 ಅಥವಾ ಡಿಸೆಂಬರ್ 1 ರಂದು ಗ್ರಾಮವನ್ನು ತಲುಪುವ ನಿರೀಕ್ಷೆಯಿದೆ.


ಏತನ್ಮಧ್ಯೆ ವಾಂಚಿಂಗ್ ಗ್ರಾಮ ಪರಿಷತ್ತು ಕಲ್ಲುಗಳಿಗೆ ಸಂಬಂಧಿಸಿದಂತೆ ಜನರನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸುವಂತೆ ನೋಟಿಸ್ ನೀಡಿತು ಮತ್ತು ಇತರ ಗ್ರಾಮಗಳು ಅಥವಾ ಪಟ್ಟಣಗಳಿಂದ ಯಾರಾದರೂ ಹಳ್ಳಿಗೆ ಬರುವುದನ್ನು ನಿರ್ಬಂಧಿಸಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.


ಬಾಹ್ಯಾಕಾಶದಲ್ಲಿ ಭಾರತೀಯ, ರಷ್ಯಾ ಉಪಗ್ರಹಗಳು ಮುಖಾಮುಖಿ, ದೊಡ್ಡ ಅನಾಹುತ ತಪ್ಪಿದ್ದೇಗೆ?


ಈ ಪ್ರದೇಶದಲ್ಲಿ ವಜ್ರಗಳು ಪತ್ತೆಯಾಗಿವೆ ಎಂಬ ಸುದ್ದಿ ವೈರಲ್ ಆಗಿದೆ. ವಿಡಿಯೋ ತುಣುಕುಗಳು ಮತ್ತು ಗ್ರಾಮಸ್ಥರು ಬೆಟ್ಟದ ಮೇಲೆ ಮಣ್ಣನ್ನು ಅಗೆಯುವ ಮತ್ತು ಅವರ ಅಂಗೈಗಳಲ್ಲಿ ಸಣ್ಣ ಸಣ್ಣ ಸ್ಫಟಿಕದ ಕಲ್ಲಿನ್ನು ಪ್ರದರ್ಶಿಸುವ ಚಿತ್ರಗಳೊಂದಿಗೆ ವೈರಲ್ ಆಗುತ್ತಿವೆ. ಆದರೆ ಈ ಪ್ರದೇಶದಲ್ಲಿ ವಜ್ರಗಳು ಇರುವುದಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಕೆಲವು ಗ್ರಾಮಸ್ಥರು ಕಂಡುಕೊಂಡ ಸಣ್ಣ ಹರಳುಗಳು ನಿಜವಾದ ವಜ್ರಗಳೇ ಎಂಬುದನ್ನು ಕಾದುನೋಡಬೇಕಿದೆ.