ನವದೆಹಲಿ:  ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. 


COMMERCIAL BREAK
SCROLL TO CONTINUE READING

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖಾನ್ನಾ ಅವರಿಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಮಾಣ ವಚನ ಬೋಧಿಸಿದರು.


ಸುಪ್ರೀಂಕೋರ್ಟ್ ಒಟ್ಟು 31 ನ್ಯಾಯಾಧೀಶ ಸ್ಥಾನಗಳಿದ್ದು, ಸದ್ಯಕ್ಕೆ 26 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರ ನೇಮಕದಿಂದಾಗಿ ಪ್ರಸ್ತುತ ನ್ಯಾಯಾಧೀಶರ ಸಂಖ್ಯೆ 28 ಆಗಿದೆ. 


ಮುಖ್ಯ ನ್ಯಾಯಾಧೀಶರಾದ ರಂಜಾನ್ ಗೊಗೋಯ್, ನ್ಯಾಯಾಧೀಶರುಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬಡೆ, ಎನ್.ವಿ.ರಮಣ್ ಮತ್ತು ಅರುಣ್ ಮಿಶ್ರಾ ಸೇರಿದಂತೆ ಐವರು ಸದಸ್ಯರ ಕೊಲಿಜಿಯಂ ಜನವರಿ 10ರಂದು ಜಸ್ಟೀಸ್ ಮಹೇಶ್ವರಿ ಮತ್ತು ಜಸ್ಟೀಸ್ ಖನ್ನಾ ಅವರಿಗೆ ಪದೋನ್ನತಿ ನೀಡಿ ನ್ಯಾಯಾಧೀಶ ಸ್ಥಾನ ನೀಡಲು ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅಂಕಿತ ಹಾಕಿದ್ದರು.