Discount Offer: Samsung Galaxy M32 5G - ನೀವು ಇತ್ತೀಚಿಗೆ ಬಿಡುಗಡೆಯಾದ  ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸುತ್ತಿದ್ದರೆ, ಇದು ನಿಮಗೆ ಉತ್ತಮ ಕೊಡುಗೆಯಾಗಿದೆ. ವಾಸ್ತವವಾಗಿ, ಸ್ಯಾಮ್‌ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ Samsung Galaxy M32 5G ಸ್ಮಾರ್ಟ್ ಫೋನ್ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ಫೋನ್‌ನ 6GB RAM ರೂಪಾಂತರದ ಮೇಲೆ ಎರಡು ಸಾವಿರ ರೂಪಾಯಿಗಳವರೆಗೆ ರಿಯಾಯಿತಿಯನ್ನು ಸಿಗುತ್ತಿದೆ. ಈ ಕೊಡುಗೆಯನ್ನು ಪಡೆಯಲು, ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸಬೇಕು. ಮೀಡಿಯಾ ಟೆಕ್ ಡೈಮೆನ್ಸಿಟಿ 720 ಪ್ರೊಸೆಸರ್ ಹೊರತುಪಡಿಸಿ, ಇದರಲ್ಲಿ ಐದು ಕ್ಯಾಮೆರಾಗಳ ಬೆಂಬಲ ನೀಡಲಾಗಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಬೆಲೆ ಎಷ್ಟು? (Samsung Galaxy M32 5G Price)
Samsung Galaxy M32 5G ಸ್ಮಾರ್ಟ್ ಫೋನ್ 6 GB RAM ಹಾಗೂ 128GB ಆಂತರಿಕ ಶೇಖರಣಾ ಸಾಮರ್ಥ್ಯ ಹೊಂದಿರುವ ವೇರಿಯಂಟ್ ಬೆಲೆ 18,999 ಆಗಿದ್ದರೆ, 8GB RAM ಹಾಗೂ 128GB ಆಂತರಿಕ ಮೆಮೊರಿ ಸಾಮರ್ತ್ಯದ ಸ್ಮಾರ್ಟ್ ಫೋನ್ ಬೆಲೆ ರೂ.20,999 ಆಗಿದೆ.


ವೈಶಿಷ್ಟ್ಯಗಳು (Samsung Galaxy M32 5G Specifications)
Samsung Galaxy M32 5G
ಸ್ಮಾರ್ಟ್‌ಫೋನ್ 6.5 ಇಂಚಿನ HD + ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 11 ಆಧಾರಿತ One UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 720 ಪ್ರೊಸೆಸರ್ ಹೊಂದಿದೆ. ಇದು 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ, ಇದನ್ನು ಮೈಕ್ರೋ SD ಕಾರ್ಡ್ ಸಹಾಯದಿಂದ 1TBವರೆಗೂ ವಿಸ್ತರಿಸಬಹುದು.


ಇದನ್ನೂ ಓದಿ-ಮನೆಯೇ ಆಗಲಿದೆ ಥಿಯೇಟರ್..! ಸೋನಿ ಬಿಡುಗಡೆ ಮಾಡಿದೆ 85 ಇಂಚಿನ ಸ್ಮಾರ್ಟ್ ಟಿವಿ


Samsung Galaxy M32 5G Camera
Samsung Galaxy M32 5G ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗ್ರಫಿಗಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ, ಇದರ ಪ್ರಾಥಮಿಕ ಕ್ಯಾಮೆರಾ 48 ಮೆಗಾಪಿಕ್ಸೆಲ್ ಆಗಿದೆ. ಇದಲ್ಲದೇ, 8 ಮೆಗಾಪಿಕ್ಸೆಲ್‌ಗಳ ಅಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಲೆನ್ಸ್ ನೀಡಲಾಗಿದೆ. 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಕೂಡ ಇದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.


ಇದನ್ನೂ ಓದಿ-ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ


ಬ್ಯಾಟರಿ ಹಾಗೂ ಕನೆಕ್ಟಿವಿಟಿ (Samsung Galaxy M32 5G Connectivity And Battery)
ಪವರ್ ಗಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ M32 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ, ಇದು 15W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಸಂಪರ್ಕಕ್ಕಾಗಿ, Wi-Fi, 5G, 4G LTE, ಬ್ಲೂಟೂತ್ 5.0, NFC, GPS ಮತ್ತು USB Type-C ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.


ಇದನ್ನೂ ಓದಿ-IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.