ಕೊಯಂಬತ್ತೂರು: ಥಾಂತಾಯ್ ಪೆರಿಯಾರ್ ದ್ರಾವಿಡರ್ ಕಳಗಂ (ಟಿಪಿಡಿಕೆ) ಪಕ್ಷವು ಗುರುವಾರ ಕೋಯಿಮತ್ತೂರು ಕುಟುಂಬ ನ್ಯಾಯಾಲಯದಲ್ಲಿ ನಾಯಿ ಮತ್ತು ಮೇಕೆ ನಡುವೆ ವಿಚ್ಛೇದನ ಕೋರಿ ಅರ್ಜಿಯನ್ನು ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ವ್ಯಾಲೆಂಟೈನ್ಸ್ ಡೇಯನ್ನು ವಿರೋಧಿಸಿ ಮದುವೆಯಾಗಿದ್ದ ನಾಯಿ ಮತ್ತು ಮೇಕೆ ಜೋಡಿಯು ಈಗ ಮದುವೆಯ ವಿಚ್ಚೇದನ ಕೋರಿ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿರುವುದು ಜನಸಾಮಾನ್ಯರಲ್ಲಿ ನಿಜಕ್ಕೂ ಅಚ್ಚರಿ ತಂದಿದೆ. ಪ್ರೇಮಿಗಳ ದಿನದಂದು ರಾಷ್ಟ್ರಾದ್ಯಂತ ವ್ಯಾಲೆಂಟೈನ್ಸ್ ಡೇ ವಿರುದ್ಧ ಹಲವಾರು ಪ್ರತಿಭಟನೆಗಳು ಕೂಡಾ ನಡೆದಿದ್ದವು.ಅದರ ಭಾಗವಾಗಿ ಈ ರೀತಿ ವಿವಿಧ ಪ್ರಾಣಿಗಳ ನಡುವೆ ಮದುವೆ ಕಾರ್ಯಕ್ರಮವನ್ನು ಏರ್ಪಡಿಸುವುದರ ಮೂಲಕ ಪ್ರೇಮಿಗಳ ದಿನವನ್ನು ವಿರೋಧಿಸಿದ್ದರು.


ಅದೇ ರೀತಿಯಾಗಿ ವ್ಯಾಲೆಂಟೈನ್ಸ್ ಡೇ ಆಚರಣೆಯ ವಿರುದ್ಧ ಪ್ರತಿಭಟಿಸಲು, ಭಾರತ್ ಹಿಂದೂ ಫ್ರಂಟ್ ಕಾರ್ಯಕರ್ತರು  ಚೆನ್ನೈನಲ್ಲಿ ನಾಯಿ ಮತ್ತು ಕತ್ತೆ ನಡುವೆ ಮದುವೆ ಆಚರಣೆಗಳನ್ನು ಮಾಡಿದ್ದರು.ಆದರೆ ನಂತರ ಪೋಲೀಸರ ಪೊಲೀಸರು ಈ ಪ್ರತಿಭಟನಾಕಾರರನ್ನು ಬಂಧಿಸಿದ್ದರು.