ಡಿಎಲ್, ಆರ್.ಸಿ ಮತ್ತಿತರ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಣೆ
ಇದಕ್ಕೂ ಮೊದಲು ಎಲ್ಲಾ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು, ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ 31ರವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
ನವದೆಹಲಿ: COVID-19 ಸೋಂಕು ತಡೆಗಟ್ಟುವಿಕೆ ಹಿನ್ನಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನ ಪರವಾಗಿ (Driving License) ಮತ್ತು ವಾಹನಗಳ ನೊಂದಣಿ ಪತ್ರಗಳು (Registrations Certificates) ಸೇರಿದಂತೆ ವಾಹನಗಳ ಎಲ್ಲಾ ದಾಖಲೆಗಳ ಸಿಂಧುತ್ವದ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ.
ಅವಧಿ ವಿಸ್ತರಣೆ ಮಾಡಿರುವ ಬಗ್ಗೆ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಿದೆ. ಕೇಂದ್ರ ಸಾರಿಗೆ ಇಲಾಖೆಯು ಈ ಮೊದಲು 2020ರ ಮಾರ್ಚ್ 30, 2020ರ ಜೂನ್ 9 ಮತ್ತು 2020ರ ಆಗಸ್ಟ್ 24ರಂದು ಮೋಟಾರು ವಾಹನ ಕಾಯಿದೆ 1988 (Motor Vehicle Act) ಮತ್ತು ಕೇಂದ್ರೀಯ ಮೋಟಾರು ವಾಹನಗಳ ನಿಯಮ 1989ರ (Motor Vehicle Act 1989) ಅನ್ವಯ ವಾಹನಗಳ ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಣೆ ಮಾಡಿ ಸೂಚನೆಗಳನ್ನು ಹೊರಡಿಸಿತ್ತು.
ಇದಕ್ಕೂ ಮೊದಲು ಎಲ್ಲಾ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು, ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ 31ರವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: ವರ್ಷಾಂತ್ಯದೊಳಗೆ ನಿಮ್ಮ DL, RC ಅನ್ನು ನವೀಕರಿಸಿ, ಇಲ್ಲವೇ...
“ಇದೀಗ Covid-19 ಸೋಂಕು ಹರಡುವುದನ್ನು ತಡೆಯುವ ಅಗತ್ಯತೆಯನ್ನು ಮನಗಂಡು, ಮೇಲೆ ಉಲ್ಲೇಖಿಸಿದ ಎಲ್ಲಾ ದಾಖಲೆಗಳ ಸಿಂಧುತ್ವ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗುವುದು. ಇದು 2020ರ ಫೆಬ್ರವರಿ 1ರ ನಂತರ ಅವಧಿ ಪೂರ್ಣಗೊಂಡ ಎಲ್ಲಾ ದಾಖಲೆಗಳಿಗೂ ಅನ್ವಯಿಸಲಿದ್ದು, ಅವುಗಳ ಮುಕ್ತಾಯದ ಅವಧಿ 2021ರ ಮಾರ್ಚ್ 31ರವರೆಗೆ ಎಂದು ಪರಿಗಣಿಸತಕ್ಕದು’’ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಸುತ್ತೋಲೆಯಲ್ಲಿ “ಸಕ್ಷಮ ಅಧಿಕಾರಿಗಳು ಅಂತಹ ದಾಖಲೆಗಳನ್ನು 2021ರ ಮಾರ್ಚ್ 31ರವರೆಗೆ ಮಾನ್ಯತೆ ಹೊಂದಿರುತ್ತವೆ ಎಂದು ಪರಿಗಣಿಸುವಂತೆ ಸೂಚಿಸಲಾಗಿದೆ. ಇದರಿಂದ ವಾಹನ ಸಂಬಂಧಿ ಸೇವೆಗಳ ವೇಳೆ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ" ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ವಿದೇಶದಲ್ಲಿರುವ ಭಾರತೀಯರಿಗೆ ದೊಡ್ಡ ಪರಿಹಾರ, ಎಲ್ಲೇ ಇದ್ದರೂ ಡ್ರೈವಿಂಗ್ ಲೈಸನ್ಸ್ ನವೀಕರಿಸಲು ಸಾಧ್ಯ
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನಿರ್ದೇಶನಗಳನ್ನು ವಸ್ತುಶಃ ಪಾಲನೆ ಮಾಡುವಂತೆ ಕೇಂದ್ರ ಸಚಿವಾಲಯ ಸೂಚನೆ ನೀಡಿದ್ದು, ಇದರಿಂದಾಗಿ ಸಾರಿಗೆ ಮತ್ತು ಇತರೆ ಸಂಸ್ಥೆಗಳಲ್ಲಿ ಕೋವಿಡ್ ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಅಥವಾ ಹೆಚ್ಚು ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.