ʼಸನಾತನ ಧರ್ಮ ಏಡ್ಸ್ʼ ಇದ್ದಂತೆ : ಉದಯನಿಧಿ ಬಳಿಕ ತಮಿಳುನಾಡು ಸಚಿವನ ವಿವಾದಾತ್ಮಕ ಹೇಳಿಕೆ
A Raja on Sanatana Dharma : ಡಿಎಂಕೆ ಸಚಿವ ಉದಯನಿಧಿ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆ ಬಳಿಕ ಇದೀಗ ಡಿಎಂಕೆ ಸಂಸದ ಎ ರಾಜಾ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆ ದೇಶಾದ್ಯಂತ ವಿವಾದ ಸೃಷ್ಟಿಸಿರುವ ಬೆನ್ನಲ್ಲೆ ಎ ರಾಜಾ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸುತ್ತಿದೆ.
Sanatana Dharma row : ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಕುರಿತು ನಡೆಯುತ್ತಿರುವ ವಿವಾದಗಳ ನಡುವೆ, ಇದೀಗ ಡಿಎಂಕೆ ಸಂಸದ ಎ ರಾಜಾ ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ರೋಗಗಳಿಗೆ ಹೋಲಿಸಿ ನೀಡಿರುವ ಹೇಳಿಕೆ ಭಾರೀ ವಿರೋಧಕ್ಕೆ ಗುರಿಯಾಗಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಎ.ರಾಜಾ, ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಅಂತ ಹೇಳಿ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಮೃದುವಾಗಿ ಹೇಳಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಅವಸ್ಥೆಗಳಿಂದ ತುಂಬಿದ ಕಾಯಿಲೆಯಾಗಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನನ್ನ ಮಗ ʼಆ ಪದʼ ಬಳಕೆ ಮಾಡಿಲ್ಲ, ಗೊತ್ತಿಲ್ಲದೆ ಮಾತನಾಡಬೇಡಿ : ಪುತ್ರನನ್ನು ಬೆಂಬಲಿಸಿ ಪಿಎಂಗೆ ಸಿಎಂ ಸ್ಟಾಲಿನ್ ಪತ್ರ
ಅಷ್ಟೆ ಅಲ್ಲದೆ ಯಾರನ್ನಾದರೂ ಕರೆತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧ ಎಂದು ಎ ರಾಜ ಸವಾಲ್ ಹಾಕಿದ್ದಾರೆ. ಇನ್ನು 10 ಲಕ್ಷ ಅಥವಾ 1 ಕೋಟಿಯಾದರೂ ಪರವಾಗಿಲ್ಲ, ಯಾವುದೇ ಆಯುಧ ಹಿಡಿದು ಬಂದರೂ ನಾನು ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ದೈರ್ಯವಾಗಿ ಚರ್ಚೆಗೆ ಬರುತ್ತೇನೆ ಎಂದು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು. ಉದಯನಿಧಿ ಹೇಳಿಕೆಗೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿತ್ತು. ಇದೀಗ ಅವರದ್ದೆ ಪಕ್ಷದ ನಾಯಕನ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.